ಇದು ಕರಾವಳಿಯಲ್ಲಿ ನಡೆಯುವ ಏಕೈಕ ನವ ಗುಳಿಗ ಸೇವೆ: ವಿಶೇಷತೆ ಏನು ಗೊತ್ತಾ?
ತುಳುನಾಡ ದೈವಾರಾಧನೆ ಇತಿಹಾಸದಲ್ಲೇ ಮೊದಲ ಬಾರಿಗೆ ನವಗುಳಿಗ ದೈವಕ್ಕೆ ಏಕಕಾಲದಲ್ಲಿ ಒಂಬತ್ತು ದೈವಗಳಿಂದ ನರ್ತನ ಸೇವೆ ನಡೆದಿದೆ.
ಕರಾವಳಿ ಭಾಗದ ಜನರಿಂದ ಹೆಚ್ಚಾಗಿ ಆರಾಧಿಸಲ್ಪಡುವ ಗುಳಿಗ ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ನರ್ತನ ಸೇವೆ ಮಾಡೋದು ಇದೆ. ಆದ್ರೆ ಇಲ್ಲಿ ಹೀಗೇ ಒಂಬತ್ತು ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗುತ್ತಿದ್ದು ಇದು ಕರಾವಳಿಯಲ್ಲಿ ನಡೆದಿರೋ ಏಕೈಕ ನವ ಗುಳಿಗ ಸೇವೆ. ಅಷ್ಟಕ್ಕೂ ಇದು ನಡೆದಿರೋದು ಎಲ್ಲಿ ಅಂದ್ರೆ ಬೆಳ್ತಂಗಡಿ ತಾಲೂಕಿನ ವೇಣೂರಿನ ಬರ್ಕಾಜೆ ಎಂಬ ಪುಟ್ಟ ಗ್ರಾಮದಲ್ಲಿ. ಇಲ್ಲಿರೋ ನವದುರ್ಗೆಯರ ದೇವಸ್ಥಾನದಲ್ಲಿ ಈ ನವಗುಳಿಗ ದೈವಗಳ ನರ್ತನ ಸೇವೆ ನಡೆಸಲಾಗಿತ್ತು. ನವ ದುರ್ಗೆಯರ ಕ್ಷೇತ್ರಪಾಲಕರಾಗಿ ಒಂಬತ್ತು ಗುಳಿಗ ದೈವಗಳು ಇಲ್ಲಿ ನೆಲೆಯಾಗಿರೋ ಕಾರಣ ಇಲ್ಲಿ ಈ ನವ ಗುಳಿಗ ನರ್ತನ ಸೇವೆ ನಡೆಸಲಾಗಿದೆ.