
Covid 19: ಕೊರೋನಾಗೆ ಬೆಂಗಳೂರು ಮಂದಿ ಡೋಂಟ್ ಕೇರ್: ರೂಲ್ಸ್ ಗಾಳಿಗೆ ತೂರಿ ಓಡಾಟ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ್ದು, ಹಲವೆಡೆ ಮಾಸ್ಕ್ ಮರೆತು ಓಡಾಡುತ್ತಿದ್ದಾರೆ.
ರಾಜ್ಯದಲ್ಲಿ ಮತ್ತೆ ಕೊರೋನಾ ಆತಂಕ ಶುರುವಾಗಿದ್ದು, ಆದರೆ ಬೆಂಗಳೂರು ಜನ ಮಾತ್ರ ಹಲವೆಡೆ ಮಾಸ್ಕ್ ಮರೆತು ಓಡಾಟ ನಡೆಸಿದ್ದಾರೆ. ರಾಜ್ಯ ಸರ್ಕಾರದ ಎಚ್ಚರಿಕೆ ಬಳಕವೂ ನೋ ಮಾಸ್ಕ್ ಎಂದಿದ್ದಾರೆ ಸಿಲಿಕಾನ್ ಸಿಟಿ ಮಂದಿ. ಕೊರೋನಾ ಆಂತಕವಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಪಾಲನೆ ಆಗುತ್ತಿಲ್ಲ. ಕಬ್ಬನ್ ಪಾರ್ಕ್‌ನಲ್ಲಿ ರೂಲ್ಸ್ ಗಾಳಿಗೆ ತೂರಿದ ಜನರು, ಮಾಸ್ಕ್ ಇಲ್ಲದೆ ವಾಕಿಂಗ್ ಮಾಡುತ್ತಿದ್ದಾರೆ. ಒಟ್ಟಾರೆ ಜನರು ಯಾವುದೇ ಕೋವಿಡ್ ನಿಯಮ ಪಾಲನೆ ಮಾಡುತ್ತಿಲ್ಲ.