ಬಳ್ಳಾರಿ: ರಾರಾವಿ ಬಳಿ ವೇದಾವತಿ ನದಿಯಲ್ಲಿ ಕೊಚ್ಚಿಹೋಗಿದ್ದ ಲಾರಿ ಪತ್ತೆ

ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ವೇದಾವತಿ ನದಿಯ ಸೇತುವೆ ದಾಟುವ ವೇಳೆ ತಾಲೂಕಿನ ರಾರಾವಿ ಬಳಿ ತೌಡು ತುಂಬಿದ ಲಾರಿ ಪಲ್ಟಿಯಾಗಿದ್ದು ಓರ್ವ ಚಾಲಕನನ್ನು ಸತತ 11 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದ್ದು, ಇನ್ನೋರ್ವ ನೀರುಪಾಲಾಗಿದ್ದಾನೆ.

Share this Video
  • FB
  • Linkdin
  • Whatsapp

ಬಳ್ಳಾರಿ (ಆ. 04):  ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ವೇದಾವತಿ ನದಿಯ ಸೇತುವೆ ದಾಟುವ ವೇಳೆ ತಾಲೂಕಿನ ರಾರಾವಿ ಬಳಿ ತೌಡು ತುಂಬಿದ ಲಾರಿ ಪಲ್ಟಿಯಾಗಿದ್ದು ಓರ್ವ ಚಾಲಕನನ್ನು ಸತತ 11 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದ್ದು, ಇನ್ನೋರ್ವ ನೀರುಪಾಲಾಗಿದ್ದಾನೆ.

ಕುಡಿದ ಮತ್ತಿನಲ್ಲಿ ಚರಂಡಿಗೆ ಬಿದ್ದ ವೃದ್ಧ, ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬಚಾವ್!

ಮಂಗಳವಾರ ಸಂಜೆ ಸುಮಾರು 6 ಗಂಟೆ ಹೊತ್ತಿಗೆ ಭತ್ತದ ತೌಡು ತುಂಬಿಕೊಂಡು ಆಂಧ್ರಪ್ರದೇಶದ ಅಧೋನಿಯತ್ತ ತೆರಳುತ್ತಿದ್ದ ಲಾರಿ, ರಾರಾವಿ ಬಳಿ ವೇದಾವತಿಯ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ದುಸ್ಸಾಹಸದಿಂದ ದಾಟಿಸಲು ಯತ್ನಿಸಿದಾಗ ಲಾರಿ ನದಿಯಲ್ಲಿ ಪಲ್ಟಿಯಾಗಿದೆ. ಆ ವೇಳೆ ಇಬ್ಬರು ಚಾಲಕರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.2 ದಿನಗಳ ಬಳಿಕ ಲಾರಿ ಪತ್ತೆಯಾಗಿದೆ. 

Related Video