ಕುಡಿದ ಮತ್ತಿನಲ್ಲಿ ಚರಂಡಿಗೆ ಬಿದ್ದ ವೃದ್ಧ, ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬಚಾವ್!

ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ವೃದ್ಧರೊಬ್ಬರು ಬಿದ್ದಿದ್ದು,  ಸ್ಥಳೀಯರು ಸಮಯ ಪ್ರಜ್ಞೆಯಿಂದ ಬಚಾವ್ ಆಗಿರುವ ಘಟನೆ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. 

Suvarna News  | Published: Aug 4, 2022, 1:14 PM IST

ಬೆಂಗಳೂರು (ಆ. 04): ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ವೃದ್ಧರೊಬ್ಬರು ಬಿದ್ದಿದ್ದು,  ಸ್ಥಳೀಯರು ಸಮಯ ಪ್ರಜ್ಞೆಯಿಂದ ಬಚಾವ್ ಆಗಿರುವ ಘಟನೆ ತಮಿಳುನಾಡಿನ ಹೊಸೂರಿನಲ್ಲಿ ನಡೆದಿದೆ. 

ಬಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ರಸ್ತೆ ಬದಿಯ ಚರಂಡಿಯನ್ನ ಮುಚ್ಚದೆ ಹಾಗೆ ಬಿಡಲಾಗಿತ್ತು. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ವೃದ್ದ. ಹರಿವ ಮಳೆ ನೀರಿನ ಜೊತೆಗೆ ಚರಂಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ದನನ್ನು ಸಾರ್ವಜನಿಕರು ರಕ್ಷಿಸಿದ್ದಾರೆ. 

ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ರಕ್ತ ಬರುತ್ತಿತ್ತು. ಆದರೂ ರಸ್ತೆಯಲ್ಲಿ ಕಿರಿಕ್ ಮಾಡಿದ್ದಾನೆ.  ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಮಾಡಿದ್ದಾನೆ. ಆಸ್ಪತ್ರೆಗೆ ಹೋಗೋದಿಲ್ಲ ಎಂದು ಪೋಲೀಸರ ಜೊತೆ ಕಿರಿಕ್ ಮಾಡಿದ್ದಾನೆ.  ತದನಂತರ ವೃದ್ದನ ಮನವೊಲಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು.