Asianet Suvarna News

ಬಳ್ಳಾರಿ: ಕಚ್ಚಿದ ಹಾವಿನ ಸಮೇತ ಆಸ್ಪತ್ರೆಗೆ ಬಂದ ಭೂಪ...!

Jun 13, 2021, 4:22 PM IST

ಬಳ್ಳಾರಿ (ಜೂ. 13): ಇಲ್ಲೊಬ್ಬ ಹಾವಿನಿಂದ ಕಚ್ಚಿಸಿಕೊಂಡ ಭೂಪ, ಇದೇ ಹಾವು ನನಗೆ ಕಚ್ಚಿದ್ದು ಎಂದು ಹಾವಿನ ಸಮೇತ ಆಸ್ಪತ್ರೆಗೆ ಬಂದಿದ್ಧಾನೆ. 

ಸಂಪ್ರದಾಯದ ಪ್ರಕಾರ ನಾಗರಹಾವಿಗೆ ಸಂಸ್ಕಾರ, ಯುವಕರ ಸತ್ಕಾರ್ಯಕ್ಕೆ ಸ್ಥಳೀಯರ ಶ್ಲಾಘನೆ

ಕಂಪ್ಲಿ ತಾಲೂಕಿನ  ಉಪಾರಹಳ್ಳಿ ಗ್ರಾಮದ ಕಡಾಪ್ಪ ಎನ್ನುವ ವ್ಯಕ್ತಿಗೆ ಹೊಲದಲ್ಲಿ ಹಾವು ಕಡಿದಿತ್ತು. ಕಚ್ಚಿದ ಹಾವಿನ ಸಮೇತ ಗ್ರಾಮಕ್ಕೆ ಬಂದಿದ್ದಾನೆ ನಂತರ  ಆಸ್ಪತ್ರೆಗೂ ಅದನ್ನು ಹಿಡಿದುಕೊಂಡು ಬಂದಿದ್ದಾನೆ. ಇದನ್ನು ಮೂರ್ಖತನ ಎನ್ನಬೇಕೋ, ಮುಗ್ಥತೆ ಎನ್ನಬೇಕೋ ಗೊತ್ತಾಗಲ್ಲ..!