Asianet Suvarna News Asianet Suvarna News

ಶಿಥಿಲಾವಸ್ಥೆ ತಲುಪಿದ ಚಿಕ್ಕಮಗಳೂರಿನ ಹಳೆಯ ಸೇತುವೆ..ಭಯದಿಂದಲೇ ವಾಹನ ಸವಾರರ ಸಂಚಾರ

ಅದು 125 ವರ್ಷದ ಹಳೆಯ ಸೇತುವೆ. ಬ್ರಿಟಿಷರು ಕಟ್ಟಿದ್ದು. ಆ ಸೇತುವೆ ಏನಾದ್ರು ಮುರಿದು ಬಿದ್ರೆ ಮೂರು ತಾಲೂಕಿನ ಜನ ಅತಂತ್ರರಾಗ್ತಾರೆ. 20-30 ಕಿ.ಮೀ. ದೂರಕ್ಕೆ 70-80 ಕಿ.ಮೀ. ಸುತ್ತಿಬಳಸಿ ಬರಬೇಕು. ಆ ಸೇತುವೆ ಬಿರುಕು ಬಿಟ್ಟಿದೆ. ಅಧಿಕಾರಿಗಳು ನೋ ಪ್ರಾಬ್ಲಂ ಅಂತೇಳಿದ್ದಾರೆ. ಆದ್ರು, ಸ್ಥಳಿಯರು-ಪ್ರವಾಸಿಗರ ಆತಂಕ ಮಾತ್ರ ದೂರವಾಗಿಲ್ಲ. 
 

ಶಿಥಿಲಗೊಂಡ ಸೇತುವೆ.. ಬ್ರಿಡ್ಜ್ ಅಕ್ಕಪಕ್ಕ ಬೆಳೆದಿರೋ ಗಿಡಗಂಟಿಗಳು. ಇದು ಶತಮಾನದ ಸೇತುವೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.. ನಿಜ ಆಂಗ್ಲರ ಕಾಲದಲ್ಲಿ ಅಂದ್ರೆ  125 ವರ್ಷಗಳ ಹಿಂದೆ ನಿರ್ಮಾಣವಾಗಿರೋ ಸೇರುವೆ ಇದು. ಚಿಕ್ಕಮಗಳೂರು(Chikkamagaluru) ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಸೇತುವೆ ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಭಾಗದ ನೂರಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತೆ. ಆದ್ರೆ, ಶಿಥಿಲಗೊಂಡ ಸೇತುವೆ ಯಾವಾಗ ಧರೆಗುರುಳುತ್ತೋ ಅನ್ನೋ ಆತಂಕದಲ್ಲಿ ಜನ ಓಡಾಡುವಂತಾಗಿದೆ. ಈ ಸೇತುವೆ(Bridge) ಸ್ಥಿತಿ ಕಂಡು 2027ರಲ್ಲೇ ಸಿಎಂ ಸಿದ್ದರಾಮಯ್ಯ ಹೊಸ ಸೇತುವೆ ಕಾಮಗಾರಿಗೆ ಗುದ್ದಿಲಿಪೂಜೆ ನೆರವೇರಿಸಿದ್ದರು. ಕೆಲಸವೂ ಆರಂಭವಾಗಿತ್ತು. ಭದ್ರಾ ನದಿ(Bhadra River) ಮಧ್ಯೆ ಪಿಲ್ಲರ್ ಹಾಗೂ ಬೀಮ್ ಮಟ್ಟಕ್ಕೆ ಏರಿಸಿ ಕೆಲಸ ನಿಲ್ಲಿಸಿದ್ರು. ಶಾಸಕ ರಾಜೇಗೌಡ ಗುತ್ತಿಗೆದಾರನಿಗೆ ಕ್ಲಾಸ್ ತೆಗೆದುಕೊಂಡಿದ್ರು. ಇದರ ಬೆನ್ನಲ್ಲೇ ಮತ್ತಷ್ಟು ಕೆಲಸ ಮಾಡಿ ಬೀಮ್ ಮಟ್ಟಕ್ಕೆ ಏರಿಸಿದ್ರು. ಇದೀಗ ಮತ್ತೆ ಕೆಲಸ ನಿಲ್ಲಿಸಿದ್ದಾರೆ. ಸರ್ಕಾರ ಸೂಕ್ತವಾಗಿ ಹಣ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರು ಹಣವಿಲ್ಲದೇ ಕೆಲಸ ನಿಲ್ಲಿಸಿದ್ದಾರೆ ಅನ್ನೋದು ಸ್ಥಳೀಯರ ಆರೋಪ. ಮಳೆಗಾಲದಲ್ಲಿ ಸೇತುವೆ ಮೇಲೆಲ್ಲ ನೀರು ತುಂಬಿಕೊಂಡು ಯಾವಾಗ ಸೇತುವೆ ಕೊಚ್ಚಿ ಹೋಗುತ್ತೋ ಅನ್ನೋ ಆತಂಕದಲ್ಲಿ ವಾಹನಗಳು ಓಡಾಡುತ್ತವೆ... ಆದ್ರೆ ಸೇತುವೆ ಪರಿಶೀಲಿನೆ ನಡೆಸಿದ ಅಧಿಕಾರಿಗಳು ಮಾತ್ರ ಸೇತುವೆ ಗಟ್ಟಿಮುಟ್ಟಾಗಿದೆ. ಓಡಾಡಬಹುದು ಅನ್ನೋ ವರದಿ ನೀಡಿದ್ದಾರಂತೆ.ಅಧಿಕಾರಿಗಳು ಸೇತುವೆ ಗಟ್ಟಿ ಮುಟ್ಟಾಗಿದೆ ಎಂದು ಹೇಳಿದ್ರೂ, ಮೇಲ್ನೋಟಕ್ಕೆ ಸೇತುವೆ ಎಷ್ಟು ಗಟ್ಟಿಮುಟ್ಟಾಗಿದೆ ಅನ್ನೋದನ್ನು ತೋರಿಸುತ್ತಿದೆ. ಇದೇ ಕಾರಣಕ್ಕೆ ಹೊಸ ಸೇತುವೆ ನಿರ್ಮಾಣಕ್ಕೆ ಚಾಲನೆ ಕೂಡ ಸಿಕ್ಕಿದೆ. ಆದ್ರೆ, ಸರಿಯಾಗಿ ಹಣ ಬಿಡುಗಡೆ ಆಗ್ತಿಲ್ಲ ಅನ್ನೋ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಇದನ್ನೂ ವೀಕ್ಷಿಸಿ:  ಗಣಿನಾಡಲ್ಲಿ ‘ಕೈ-ಕಮಲ’ದ ಮಧ್ಯೆ ಟವರ್ ರಾಜಕೀಯ.. ರಾಷ್ಟ್ರೀಯ ಪಕ್ಷಗಳ ಕಿತ್ತಾಟದಿಂದ ಅರ್ಧಕ್ಕೆ ನಿಂತ ಕೆಲಸ

Video Top Stories