New Year: ನ್ಯೂ ಇಯರ್ ಆಚರಣೆಗೆ ಭಜರಂಗದಳ ವಿರೋಧ: ಚಿಕ್ಕಮಗಳೂರು ಎಸ್.ಪಿಗೆ ಮನವಿ

ಹೊಸ ವರ್ಷಕ್ಕೆ ಕಾಫಿನಾಡು ಚಿಕ್ಕಮಗಳೂರು ಸಜ್ಜಾಗಿದ್ದು, ಹೊಸ ವರ್ಷದ ಆಚರಣೆಗೆ ಭಜರಂಗದಳ ವಿರೋಧ ವ್ಯಕ್ತಪಡಿಸಿದೆ.

Share this Video
  • FB
  • Linkdin
  • Whatsapp

ಪಾಶ್ಚಾತ್ಯ ಸಂಸ್ಕೃತಿ ಹೆಸರಿನಲ್ಲಿ ಮುಗ್ಧ ಹೆಣ್ಣುಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಹೊಸ ವರ್ಷದ ನೆಪದಲ್ಲಿ ಅಶ್ಲೀಲ ನೃತ್ಯ ಎಣ್ಣೆ ಡ್ರಗ್ಸ್‌ ಪಾರ್ಟಿ ನಡಿತಿದೆ. ಹೆಣ್ಣು ಮಕ್ಕಳ ದುರ್ಬಳಕೆಯನ್ನು ಖಂಡಿಸುತ್ತೇವೆಂದು ಚಿಕ್ಕಮಗಳೂರು SPಗೆ ಭಜರಂಗದಳದಿಂದ ಮನವಿ ಮಾಡಲಾಗಿದೆ. ನಮ್ಮ ಸಂಸ್ಕ್ರತಿಯ ಪ್ರಕಾರ ಯುಗಾದಿಗೆ ಹೊಸ ವರ್ಷ. ಧರ್ಮದ ಆಚರಣೆಗೆ ವಿರೋಧ ಇಲ್ಲ. ಪಾಶ್ಚಾತ್ಯ ಸಂಸ್ಕೃತಿ ಹೆಸರಿನಲ್ಲಿ ಮುಗ್ಧ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು, ಲವ್‌ ಜಿಹಾದ್'ನಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದಕ್ಕೆ ಮೂಲ ಕಾರಣನೇ ಇವತ್ತಿನ ಈ ನ್ಯೂ ಇಯರ್‌. ಭಜರಂಗದಳ ಇದನ್ನು ಖಂಡಿಸುತ್ತೆ ಎಂದು ಭಜರಂಗದಳ ಮುಖ್ಯಸ್ಥರು ಹೇಳಿದ್ದಾರೆ.

Related Video