ಈಗಷ್ಟೇ ಮದುವೆಯಾಗಿದೆ 10 ಮಕ್ಕಳಾಗಬೇಕು ಎಂದರೆ ಹೇಗೆ?: ಡಿಕೆಶಿ ವಿರುದ್ಧ ಹರಿಹಾಯ್ದ ಈಶ್ವರಪ್ಪ

ಕುಮಾರಸ್ವಾಮಿ ಟೀಕೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಎರಡು ಪ್ರವರ್ಗ ರಚಿಸಲಾಗಿದೆ. ಈ ಎರಡು ಪ್ರವರ್ಗದಲ್ಲಿ ಯಾರನ್ನ ಸೇರಿಸಬಹುದು ಎಂಬುದು ಚರ್ಚೆ ನಡೆಯುತ್ತಿದೆ. ಡಿಕೆಶಿ, ಸಿದ್ದರಾಮಯ್ಯ, ಹೆಚ್‍ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಹಕಾರ ಕೊಡವಂತೆ ಮನವಿ ಮಾಡುತ್ತೇನೆ: ಈಶ್ವರಪ್ಪ

Former Minister KS Eshwarappa Slams DK Shivakumar grg

ಶಿವಮೊಗ್ಗ(ಡಿ.31):  ಪಂಚಮಸಾಲಿಯವರನ್ನ 2 ಡಿ ಮತ್ತೆ ಒಕ್ಕಲಿಗರನ್ನ 2 ಸಿಗೆ ಸೇರಿಸಬೇಕು ಎಂಬ ಬಿಜೆಪಿಯ ಪ್ರಯತ್ನಕ್ಕೆ ಇದು ಮೊದಲ ಹೆಜ್ಜೆಯಾಗಿದೆ. ಇದು ಹೊಸ ಮೀಸಲಾತಿಯಾಗಿ ಹೊರಬರುವ ಸಾಧ್ಯತೆ ಇದೆ. ಇದಕ್ಕೆ ಇಎಸ್ ಡಬ್ಲ್ಯೂ ಯಿಂದ ಎಷ್ಟು ಮೀಸಲಾತಿ ನೀಡಬಹುದು ಬೇರೆ ಕಡೆಯಿಂದ ಎಷ್ಟು ಮೀಸಲು ತರಬಹುದು ಎಂಬುದು ಚರ್ಚೆ ನಡೆಯುತ್ತಿದೆ. ಇದಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಸಹಕಾರ ನೀಡಬೇಕು. ಈಗಷ್ಟೇ ಮದುವೆಯಾಗಿದೆ 10 ಮಕ್ಕಳಾಗಬೇಕು ಎಂದರೆ ಹೇಗೆ? ಅಂತ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

ಪಂಚಮಸಾಲಿ ಮತ್ತು ಒಕ್ಕಲಿಗರಿಗೆ 2 ಡಿ ಮತ್ತು 2 ಸಿ ಮೀಸಲಾತಿ ನೀಡುವುದು ಕೇವಲ ಘೋಷಣೆ ಆಗಲಿದೆ ಎಂದು ಡಿಕೆಶಿ ಹೇಳಿಕೆಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ನೀಡಬೇಕು ಎಂಬ ಮೊದಲ ಹೆಜ್ಜೆಯನ್ನ ಬಿಜೆಪಿ ಇಟ್ಟಿದೆ. ಅದಕ್ಕೆ ಸಮಯಬೇಕು ಅಂತ ಹೇಳಿದ್ದಾರೆ. 

ವರಿಷ್ಠರು ಒಪ್ಪಿದರೆ ಜಾರಕಿಹೊಳಿ, ಈಶ್ವರಪ್ಪಗೆ ಶೀಘ್ರ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ

ಮೀಸಲಾತಿಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿರುವ ಬಗ್ಗೆ ಮಾತನಾಡಿದ ಈಶ್ವರಪ್ಪ, ಕುಮಾರಸ್ವಾಮಿ ಟೀಕೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಎರಡು ಪ್ರವರ್ಗ ರಚಿಸಲಾಗಿದೆ. ಈ ಎರಡು ಪ್ರವರ್ಗದಲ್ಲಿ ಯಾರನ್ನ ಸೇರಿಸಬಹುದು ಎಂಬುದು ಚರ್ಚೆ ನಡೆಯುತ್ತಿದೆ. ಡಿಕೆಶಿ, ಸಿದ್ದರಾಮಯ್ಯ, ಹೆಚ್‍ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಹಕಾರ ಕೊಡವಂತೆ ಮನವಿ ಮಾಡುತ್ತೇನೆ ಅಂತ ತಿಳಿಸಿದ್ದಾರೆ. 

ಸಿದ್ದರಾಮಯ್ಯರನ್ನ ಬಸವಪ್ರಭು ಸ್ವಾಮಿಗಳೇ ಮುಂದಿನ ಸಿಎಂ ಎಂದು ಘೋಷಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿಎಂ ಅಂತ ಘೋಷಣೆ ಯಾಕೆ?, ಸಿಎಂ ಸ್ಥಾನದಲ್ಲಿ ಕೂರಿಸಬೇಕಿತ್ತು. ಬಿಜೆಪಿ, ಕೆಜೆಪಿ ಒಡೆಯದಿದ್ದರೆ ಸಿದ್ದರಾಮಯ್ಯ ಜನ್ಮದಲ್ಲಿ ಸಿಎಂ ಆಗ್ತಾ ಇರಲಿಲ್ಲ ಅಂತ ಸಿದ್ದು ವಿರುದ್ಧ ಹರಿಹಾಯ್ದಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಮತ್ತೆ ಬರಲಿದೆ. ಅಮಿತ್ ಶಾ ಪ್ರವಾಸವನ್ನ ಡಿಕೆಶಿ ಟೀಕಿಸಿದ್ದಾರೆ. ಭಾರತ್ ಜೋಡೋವನ್ನ ರಾಹುಲ್ ಮಾಡಿದ್ರೆ ಭಾರತ್ ಜೋಡೋ ಆಗಿಬಿಡುತ್ತಾ ಎಂದರೆ ಹೇಗಿರುತ್ತೆ. ಹಾಗೆ ಅಮಿತ್ ಶಾ ಬಂದು ಮಂಡ್ಯ ಅಭಿವೃದ್ಧಿ ಆಗಿಬಿಡುತ್ತಾ ಎಂದರೆ ಹೇಗೆ?. ಪ್ರಯತ್ನ ನಡೆದಿದೆ. ಅಮಿತ್ ಶಾ ಭಾರತದ ಎರಡನೇ ವಲ್ಲಭಾಯ್ ಪಟೇಲ್ ಎಂದರೆ ತಪ್ಪಾಗದು. ಅವರು ಗೃಹ ಸಚಿವರು ಆದಾಗಿನಿಂದ ಭಯೋತ್ಪಾದನೆ ನಿಯಂತ್ರಗೊಂಡಿದೆ. ಭಯೋತ್ಪದನೆಯನ್ನ ಡಿಕೆಶಿ ಮತ್ತು ಸಿದ್ದರಾಮಯ್ಯನವರು ಓಲೈಸುವುದನ್ನ ನಿಲ್ಲಿಸಬೇಕು. ಇಲ್ಲವಾದಲ್ಲಿ ಅವರಿಗೆ ಈಗ ಬಂದಿರುವ ಸ್ಥಾನಗಳು ಮುಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತಾರೆ. ಹೊಸ ವರ್ಷ ನಮಗಂತು ಅಲ್ಲ. ಯುಗಾದಿ ನಮಗೆ ಹೊಸವರ್ಷ. ಕ್ರಿಶ್ಚಿಯನ್ನರು ಹಬ್ಬ ಆಚರಿಸಲಿ ಅಂತ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios