Protest in Bagalkote

Share this Video
  • FB
  • Linkdin
  • Whatsapp

ಬಾಗಲಕೋಟೆ: ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಗೆ ನಿಯಮಬಾಹಿರವಾಗಿ ನೀರು ಹಂಚಿಕೆಯಾಗುತ್ತಿದೆ ಎಂದು ಆರೋಪಿಸಿ, ಸಚಿವ ಎಂ.ಬಿ. ಪಾಟೀಲ ವಿರುದ್ಧ ಜಮಖಂಡಿ ತಹಶೀಲ್ದಾರ್ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ಸಚಿವರಿಂದ ಪ್ರಭಾವ ಬಳಸಿ ಕೃಷ್ಣಾ ನದಿಯ ನೀರು ಅಕ್ರಮ ಬಳಕೆಯಾಗುತ್ತಿದೆ ಎಂದು ಜಮಖಂಡಿ ಭಾಗದ ರೈತರು ಆಕ್ರೋಶ ಹೊರಹಾಕಿದ್ದಾರೆ.ಕಳೆದು ಒಂದು ವಾರದಿಂದ ನೀರು ಲಿಫ್ಟ್ ಮಾಡಲಾಗ್ತಿದೆ, ಇದು ಹೀಗೆ ಮುಂದುವರೆದರೆ ನದಿ ನೀರು ಖಾಲಿಯಾಗುತ್ತೆ, ಮಳೆಗಾಲದಲ್ಲಿ ಮಾತ್ರ ಕೃಷ್ಣಾ ನದಿ ಬಳಕೆಗೆ ಅವಕಾಶ ಇದೆ, ಆದ್ರೆ ಬೇಸಿಗೆ ಕಾಲ ಸಮೀಪ ನೀರು ಲಿಫ್ಟ್ ಮಾಡಲಾಗ್ತಿದೆ, ಕೂಡಲೇ ನೀರು ಲಿಫ್ಟ್ ಮಾಡೋದನ್ನು ನಿಲ್ಲಿಸಬೇಕು, ಇಲ್ಲದೇ ಇದ್ರೆ ಈ ಭಾಗದ ರೈತರ ಭಾರಿ ಅನ್ಯಾಯ ಆಗುತ್ತದೆ, ಎಂದು ರೈತರು ಹೇಳಿದ್ದಾರೆಎಂ.ಬಿ. ಪಾಟೀಲರು ಕೇವರ ಬಬಲೇಶ್ವರ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ, ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದ್ದಾರೆಂದು ರೈತರು ಕಿಡಿಕಾರಿದ್ದಾರೆ. ಈ ಭಾಗದ ರೈತರು ದೊಡ್ಡ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ನೀಡಿರುವ ರೈತರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video