ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

* ಇದೊಂದು ಅತ್ಯಂತ ಅಪರೂಪದ ಮದುವೆ
* ಕುಬ್ಜ ಯುವಕನ ಬಾಳಿಗೆ  ಜತೆಯಾದ ರುಕ್ಮಿಣಿ
* ಈ ಜೋಡಿಗೆ ಎಲ್ಲರ ಹಾರೈಕೆ ಬೇಕು

First Published Feb 20, 2022, 9:38 PM IST | Last Updated Feb 20, 2022, 9:38 PM IST

ಬಾಗಲಕೋಟೆ(ಫೆ. 20) ಇದೊಂದು  ವಿಶಿಷ್ಟ (Marriage) ಮದುವೆ. ಎಲ್ಲರ ಹಾರೈಕೆ ಈ ಜೋಡಿ ಮೇಲೆ ಇರಲೇಬೇಕು.  ಕುಬ್ಜ ಯುವಕ ಬಸವರಾಜ ಮತ್ತು  ರುಕ್ಮಿಣಿ ದಂಪತಿಯಾಗಿದ್ದಾರೆ.   ಬಾಗಲಕೋಟೆ (Bagalakote) ಜಿಲ್ಲೆಯ ನೀಲಗುಂದ ಈ ಮದುವೆಗೆ ಸಾಕ್ಷಿಯಾಯಿತು.

30 ವಷ೯ದ ಬಸವರಾಜ್ ಕುಬ್ಜನಾಗಿದ್ದರಿಂದ ಕನ್ಯೆಗಾಗಿ ಹುಡುಕಾಡುತ್ತಿದ್ದ. ಈ ವೇಳೆ ಹಿರಿಯರ ಆಶಯ ಸೇರಿದಂತೆ ತಾನೂ  ಒಪ್ಪಿ ಯುವಕನನ್ನು ರುಕ್ಮಿಣಿ ಮದುವೆಯಾಗಿದ್ದಾಳೆ.  ಬಸವರಾಜ್ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೇನೆ.  ಯಾರ ಒತ್ತಡವೂ ಇಲ್ಲ, ಪ್ರೇಮದಿಂದಲೇ ಮದುವೆಯಾಗಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.  5 ವಷ೯ದಿಂದ ಕನ್ಯೆ ಹುಡುಕುತ್ತಿದ್ದವ ಈಗ ಸಂಸಾರಿಯಾಗಿದ್ದಾನೆ.