ಗೋವಿಗೆ ಸೀಮಂತ ಕಾರ್ಯ: ಗೋ ಪ್ರೇಮ ಮೆರೆದ ರೈತ ಕುಟುಂಬ

ರೈತ ರಮೇಶ್ ‌ತಿಗಡಿ ಕುಟುಂಬ ಗರ್ಭ ಧರಿಸಿದ ಗೋವಿಗೆ ಸೀಮಂತ‌ ಕಾರ್ಯ ಮಾಡಿದೆ.
 

Share this Video
  • FB
  • Linkdin
  • Whatsapp

ಬೆಳಗಾವಿ: ಮೊದಲ‌ ಬಾರಿಗೆ ಗರ್ಭ ಧರಿಸಿದ ಗೋವಿಗೆ ಸೀಮಂತ‌ ಕಾರ್ಯ ಮಾಡಿರುವ ಘಟನೆ ಬೆಳಗಾವಿ(Belagavi) ಜಿಲ್ಲೆಯ ‌ಗೋಕಾಕ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ(Farmer) ರಮೇಶ್ ‌ತಿಗಡಿ ಕುಟುಂಬ ಗೋವಿನ ಸೀಮ‌ಂತ ಕಾರ್ಯ(Baby Shower Celebration) ನೆರವೇರಿಸಿದೆ. ಭಾರತೀಯ ಸಂಪ್ರಾದದಲ್ಲಿ ಗರ್ಭಿಣಿಗೆ ಸೀಮಂತ ಮಾಡುವುದು ವಾಡಿಕೆಯಾಗಿದೆ. ಅದೇ ರೀತಿ ಸಂಬಂಧಿಕರು, ಸ್ನೇಹಿತರು ಗ್ರಾಮದವರ ಸಮ್ಮುಖದಲ್ಲಿ ‌ಗೋವಿಗೂ ಸೀಮಂತ ಕಾರ್ಯ ಮಾಡಲಾಗಿದೆ. ಗೋವಿಗೆ ಸೀರೆ ಉಡಿಸಿ, ಆರತಿ ಎತ್ತಿ ಸೋಬಾನೆ ಪದ ಹಾಡಿ ಗೋಮಾತೆಗೆ ಸೀಮಂತ ಕಾರ್ಯ ಮಾಡಲಾಗಿದೆ. ಸೀಮಂತ ಕಾರ್ಯದಲ್ಲಿ ಪಾಲ್ಗೊಂಡ‌ ಕುಟುಂಬಸ್ಥರಿಗೆ ಭರ್ಜರಿ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಇದನ್ನೂ ವೀಕ್ಷಿಸಿ: ಲೋಕಸಮರಕ್ಕೆ ‘ಮೋದಿ ಕಿ ಗ್ಯಾರಂಟಿ’ ಘೋಷವಾಕ್ಯ: ಅಮೋಘ ಗೆಲುವಿನ ಗುರಿ ಕೊಟ್ಟ BJP ಬಿಗ್ ಬಾಸ್..!

Related Video