ಮಳಲಿ ಮಸೀದಿ ವಿವಾದ: ಅಷ್ಟಮಂಗಲದಲ್ಲಿ ಸಿಗುತ್ತಾ ಪರಿಹಾರ?
ಮಳಲಿಯಲ್ಲಿರುವುದು ಮಸೀದಿಯೋ ಅಥವಾ ದೇಗುಲವೋ ಎಂಬ ಪ್ರಶ್ನೆಗೆ ಅಷ್ಟಮಂಗಲದಲ್ಲಿ ಪರಿಹಾರ ಸಿಗುತ್ತಾ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಅನೇಕ ಕುತೂಹಲಕಾರಿ ಸಂಗತಿಗಳು ಇವೆ
ಮಂಗಳೂರಿನ ಮಳಲಿ ಮಸೀದಿ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳಲಿಯಲ್ಲಿ ಮಸೀದಿಯಿರುವ ಜಾಗ ದೇವಸ್ಥಾನಕ್ಕೆ ಸೇರಿದ್ದು ಎನ್ನುವ ಗಟ್ಟಿ ನಂಬಿಕೆ ಈಗ ಜಾಗೃತವಾಗಿದೆ. ಒಂದು ಕಡೆ ಕಾನೂನು ಹೋರಾಟ, ಇನ್ನೊಂದು ಕಡೆ ಧಾರ್ಮಿಕ ಹೋರಾಟ ನಡೆದಿದೆ. ಇದೀಗ ಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗಲು ಸಿದ್ಧತೆ ನಡೆದಿದೆ. ಇದರ ಪ್ರಕ್ರಿಯೆ ಏನು? ಪ್ರಶ್ನಾ ಮಾರ್ಗವನ್ನು ಕಾನೂನು ಒಪ್ಪುತ್ತಾ ಎಂಬ ಕುತೂಹಲ ಹಲವರಲ್ಲಿದೆ. ಈ ಎಲ್ಲದರ ನಡುವೆ ಅಷ್ಟಮಂಗಲ ಪ್ರಶ್ನೆಯ ಮೂಲಕ, ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ.
ಕೊಪ್ಪಳದಲ್ಲಿ ವಿಚಿತ್ರ ಕಾಯಿಲೆಗೆ 20ಕ್ಕೂ ಅಧಿಕ ರಾಸುಗಳ ಸಾವು: ರೈತರು ಕಂಗಾಲು