ಯಾದಗಿರಿ; ನಾಡಬಂದೂಕಿನಿಂದ ಗುಂಡು ಪ್ರಕರಣ, ಮೂವರು ಪೊಲೀಸರು ಸಸ್ಪೆಂಡ್!

* ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವರ ಸ್ವಾಗತ ಪ್ರಕರಣ
* ಮೂವರು ಪೊಲೀಸರ ಅಮಾನತು
* ರಾಷ್ಟ್ರ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ನಾಡಬಂದೂಕು ಪ್ರಕರಣ

Share this Video
  • FB
  • Linkdin
  • Whatsapp

ಯಾದಗಿರಿ(ಆ.19) ನಾಡ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಪ್ರಕರಣದ ಬಗ್ಗೆ ನಿರಂತರವಾಗಿ ವರದಿ ಪ್ರಸಾರ ಮಾಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿತ್ತು.

ಜನಾಶೀರ್ವಾದ ಯಾತ್ರೆಗೆ ಕಪ್ಪು ಚುಕ್ಕೆ ಇಟ್ಟ ಖೂಬಾ

ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಪ್ರತಿಕ್ರಿಯೆ ನೀಡಿದ್ದರು. ನಾಡಬಂದೂಕಿನಿಂದ ಗುಂಡು ಹಾರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅಧಿಕಾರ ಸಿಕ್ಕವರು ಈ ರೀತಿ ವರ್ತನೆ ಮಾಡುವುದು ಸರಿಯೇ ಎಂದು ಜನ ಪ್ರಶ್ನೆ ಮಾಡಿದ್ದರು.

Related Video