ಮೈಸೂರು ದಸರಾಗೆ ಅಶ್ವತ್ಥಾಮ ಎಂಟ್ರಿ?
ಪ್ರತಿ ವರ್ಷ ಮೈಸೂರು ದಸರಾ ನೋಡೊಕೆ ನಾವೆಲ್ಲ ಕಾತರದಿಂದ ಕಾಯ್ತಿವಿ. ಅದ್ರಲ್ಲೂ ಜಂಬೂ ಸವಾರಿಯಲ್ಲಿ ಸಾಗೋ ಆನೆಗಳನ್ನ ನೋಡೋಕೆ ಮಕ್ಕಳು ತುದಿಗಾಗಲ್ಲಿ ನಿಂತಿರ್ತಾರೆ. ಆದ್ರೆ ಇಲ್ಲಿ ಆನೆಯೇ ಜಂಬೂ ಸವಾರಿ ನೋಡಿಕೊಂಡು ಹೋಗೊಕೆ ಬಂದಿದೆ ಅಂದ್ರೆ ನೀವು ನಂಬಲೇ ಬೇಕು. ಮೊದಲ ಬಾರಿ ಮೈಸೂರಿಗೆ ಎಂಟ್ರಿ ಕೊಟ್ಟಿರೋ ಈ ತರುಣ ಆನೆಗೆ ನಗರದ ಭಯ ಈಗಷ್ಟೇ ಕಡಿಮೆ ಆಗ್ತಿದೆ.
ಮೈಸೂರು(ಸೆ.30): ಜಂಬೂ ಸವಾರಿ ಟೀಂನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿರೋ 34 ವರ್ಷದ ಅಶ್ವತ್ಥಾಮ ಆನೆ ವಿಚಾರವನ್ನ. ಗಜಪಡೆಯ 8 ಆನೆಗಳ ಪೈಕಿ ತರುಣ ಆನೆ ಎನಿಸಿಕೊಂಡಿರುವ ಅಶ್ವತ್ಥಾಮ ಆನೆ ನೋಡಲು ಬಲು ಆಕರ್ಷಣೆ ಹೊಂದಿದೆ. ಅಗಲವಾದ ಅಣೆಪಟ್ಟಿ, ಎತ್ತರವಾದ ಮೈಕಟ್ಟು, ವಿಶಾಲವಾದ ಬೆನ್ನು ಇದ್ದೆಲ್ಲವನ್ನು ಪರಿಗಣಿಸಿರುವ ಅರಣ್ಯ ಇಲಾಖೆ ಈ ಆನೆಯನ್ನು ಎರಡನೇ ಸಾಲಿನ ಪ್ರಮುಖ ಆನೆಯಾಗಿ ಪರಿಗಣಿಸಿದೆ.
ದಸರಾ ಉದ್ಘಾಟನೆ: ಸಂಪ್ರದಾಯ ಮುರಿದು ಎಸ್. ಎಂ ಕೃಷ್ಣರನ್ನೇಕೆ ಕರೆದಿದ್ದು ಬೊಮ್ಮಾಯಿ?!
ಮೊದಲ ಬಾರಿಗೆ ದಸರಾದಲ್ಲಿ(Dussehra) ಪಾಲ್ಗೊಳ್ಳುವ ಅವಕಾಶ ಪಡೆದಿರುವ ಅಶ್ವತ್ಥಾಮ ಆನೆಯನ್ನು ಹಾಸನ ಜಿಲ್ಲೆ ಸಕಲೇಶಪುರ ಸುತ್ತಮುತ್ತ 2017 ರಲ್ಲಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಕೇವಲ ನಾಲ್ಕು ವರ್ಷಗಳಲ್ಲಿ ಪುಂಡಾನೆ ಗಂಭೀರ ಆನೆಯಾಗಿ ಬದಲಾಗಿದೆ. ಈ ಕಾರಣಕ್ಕೆ ಅರಣ್ಯ ಇಲಾಖೆ(Forest department) ಅಧಿಕಾರಿಗಳು ಈ ಬಾರಿ ದಸರಾಕ್ಕೆ ಅಶ್ವತ್ಥಾಮನನ್ನು ಕರೆತಂದಿದ್ದಾರೆ. 34 ರ ಹರೆಯದ ಆಕರ್ಷಕ ಆನೆಯು 2.85 ಮೀಟರ್ ಎತ್ತರ, 3.46 ಉದ್ದದ ದೇಹ ಹಾಗೂ 3,630 ಕೆ.ಜಿ ತೂಕವಿದೆ. ಸಮತಟ್ಟಾದ ಬೆನ್ನು ನೀಳ ದಂತ ಹೊಂದಿರುವುದರಿಂದ ಅಭಿಮನ್ಯುವಿನ ಉತ್ತರಾಧಿಕಾರಿಗಳ ಆನೆಗಳ ಪಟ್ಟಿಯಲ್ಲಿ ಈತನು ಸೇರ್ಪಡೆಗೊಂಡಿದ್ದಾನೆ.