ಅನ್ನಭಾಗ್ಯ ಯೋಜನೆಗೆ ಮುಹೂರ್ತ ಫಿಕ್ಸ್: ಯಾರಿಗೆಲ್ಲಾ ಸಿಗುತ್ತೆ ದುಡ್ಡು ?
ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಅಕೌಂಟ್‌ಗೆ ಸರ್ಕಾರ ಜುಲೈ 10 ರಂದು ಹಣ ಹಾಕಲು ನಿರ್ಧರಿಸಿದೆ.
ಸಿದ್ದರಾಮಯ್ಯ (Siddaramaiah) ಸರ್ಕಾರದ ಅನ್ನಭಾಗ್ಯ (Anna Bhagya) ಯೋಜನೆಗೆ ಮುಹೂರ್ತ ಫಿಕ್ಸ್ ಆಗಿದೆ. ಜುಲೈ 10 ರಂದು ಫಲಾನುಭವಿಗಳ ಅಕೌಂಟ್‌ಗೆ ಬೀಳಲಿದೆ ಹಣ. ಅಲ್ಲದೇ ಇದಕ್ಕೆ ಕೆಲವು ಕಂಡೀಷನ್ಸ್‌ನನ್ನು ಸರ್ಕಾರ ಹಾಕಿದೆ. ಅಂತ್ಯೋದಯ ಕಾರ್ಡ್‌ನಲ್ಲಿ 3 ಜನಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಹಣ ಸಿಗಲಿದೆ. ಫಲಾನುಭವಿಗಳ ಮಾರ್ಗಸೂಚಿಯನ್ನು ಆಹಾರ ಇಲಾಖೆ ಬಿಡುಗಡೆ ಮಾಡಿದೆ. ಯಾರಿಗೆ ಹಣ ಹಾಕಬೇಕು ಎಂಬ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ರೇಷನ್ ಕಾರ್ಡ್‌ಗೆ(ration card) ಯಾರೆಲ್ಲಾ ಆಧಾರ್ ಕಾರ್ಡ್(Aadhaar card) ಲಿಂಕ್ ಮಾಡಿಸಿರುತ್ತಾರೋ ಅವರಿಗೆ ಹಣ ದೊರೆಯಲಿದೆ. ಸರ್ಕಾರ ಕೆಜಿಗೆ 34 ರೂಪಾಯಿಯಂತೆ ಒಟ್ಟು 174 ರೂಪಾಯಿ ಹಾಕಲಿದೆ. ಜೊತೆಗೆ ಮೂರು ತಿಂಗಳಿನಿಂದ ಅಕ್ಕಿ ಪಡೆಯದವರಿಗೆ ಹಣವನ್ನು ಹಾಕದಿರಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ವೀಕ್ಷಿಸಿ: ಕಲಾಪದ ವೇಳೆ ಭದ್ರತಾ ಲೋಪ: 15 ನಿಮಿಷ ಬಜೆಟ್ ಕಲಾಪದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿ !