ಹುಬ್ಬಳ್ಳಿ ಈದ್ಗಾ ಮೈದಾನಲ್ಲಿ ಗಣೇಶ ಪ್ರತಿಷ್ಠಾಪನೆ: ಸುಪ್ರೀಂಗೆ ಅಂಜುಮನ್ ಸಂಸ್ಥೆ ಮೊರೆ

ಹುಬ್ಬಳ್ಳಿ ಪಾಲಿಕೆ ಆಯುಕ್ತರ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ ಹೈಕೋರ್ಟ್‌, ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಅಂಜುಮನ್‌ ಸಂಸ್ಥೆ 

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಆ.31): ನಗರದ ಈದ್ಗಾ ಮೈದಾನದ ಗಣೇಶೋತ್ಸವಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ. ಅಂಜುಮನ್‌ ಸಂಸ್ಥೆ ಸಲ್ಲಿಸಿದ ಮೇಲ್ಮನವಿಯನ್ನ ಹೈಕೋರ್ಟ್‌ ವಜಾಗೊಳಿಸಿದೆ. ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ ಬಂದಿದೆ. ಹುಬ್ಬಳ್ಳಿ ಪಾಲಿಕೆ ಆಯುಕ್ತರ ನಿರ್ಧಾರಕ್ಕೆ ಹೈಕೋರ್ಟ್‌ ಸಮ್ಮತಿಯನ್ನ ಸೂಚಿಸಿದೆ. ಆದರೆ, ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಅಂಜುಮನ್‌ ಸಂಸ್ಥೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅಂಜುಮನ್‌ ಸಂಸ್ಥೆಯ ಸದಸ್ಯರು ರಾತ್ರೋ ರಾತ್ರಿ ದೆಹಲಿಗೆ ತೆರಳಿದ್ದಾರೆ.

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಹುಬ್ಬಳ್ಳಿ; ಈದ್ಗಾದಲ್ಲಿ ಗಣೇಶ ಪ್ರತಿಷ್ಠಾಪನೆ

Related Video