Chitradurga: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ನೀರು ಹಂಚಿಕೆ ವಿಚಾರದಲ್ಲಿ ಆಂಧ್ರ ಕ್ಯಾತೆ

- ಭದ್ರಾ ಮೇಲ್ದಂಡೆ ಯೋಜನೆ ಮಧ್ಯಕರ್ನಾಟಕದ ಕನಸಿನ ಯೋಜನೆ - ರಾಷ್ಟ್ರೀಯ ಯೋಜನೆ ಘೋಷಣೆಯಾದ್ರೂ ಇನ್ನೂ ಬಾರದ ಅನುದಾನ- ನೀರಿನ ಹಂಚಿಕೆ  ವಿಚಾರದಲ್ಲಿ ನೆರೆಯ ಆಂಧ್ರ ಪ್ರದೇಶದಿಂದ ಕ್ಯಾತೆ 
 

Share this Video
  • FB
  • Linkdin
  • Whatsapp

ಚಿತ್ರದುರ್ಗ (ಜ. 05): ಮಧ್ಯಕರ್ನಾಟಕದ ಕನಸಿನ ಯೋಜನೆ ಅಂದ್ರೆ ಅದು ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಈ ಯೋಜನೆ ಜಾರಿಯಾದ್ರೆ ಬರದನಾಡು ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನರ ಬವಣೆ ನೀಗಲಿದೆ. ಹೀಗಾಗಿ ರಾಷ್ಟ್ರೀಯ ಯೋಜನೆ ಅಂತ ಘೋಷಣೆಯಾಗಿ ಒಂದು ತಿಂಗಳೇ ಕಳೆದು ಹೋಯ್ತು. ಆದರೆ ಕೇಂದ್ರ ಸರ್ಕಾರದಿಂದ ಈವರೆಗೆ ನಯಾಪೈಸಾ ಅನುದಾನ ಮಾತ್ರ ಬಿಡುಗಡೆ ಆಗಿಲ್ಲ. ಈ ನಡುವೆ ನೆರೆಯ ಆಂಧ್ರ ಪ್ರದೇಶ ಹೊಸ ಕ್ಯಾತೆಯೊಂದನ್ನು ಶುರುಮಾಡಿದೆ. 

ಬಯಲು ಸೀಮೆ ಜನರ ಕನಸು ನನಸು, ಭೂಮಿಗೆ ತಂಪೆರೆಯಲಿದ್ದಾಳೆ ಭದ್ರೆ..!

ತುಂಗಾಭದ್ರಾ ನೀರಿನ ಹಂಚಿಕೆ ಹಾಗೂ ಹರಿಸುವಿಕೆ ವಿಚಾರದಲ್ಲಿ ಶಂಕೆ ವ್ಯಕ್ತಪಡಿಸಿದೆ. ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸುವ ಮುನ್ನ ಆಂಧ್ರಕ್ಕೆ ಆಗುವ ಅನ್ಯಾಯದ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ ಯೋಜನೆ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇದು ಎರಡು ರಾಜ್ಯಗಳ ನಡುವೆ ಬಾರಿ ದ್ವೇಷಕ್ಕೆ ದಾರಿಯಾಗಿದ್ದೂ, ಕೋಟೆನಾಡಿನ ರೈತರು ಆಂಧ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

 ಇನ್ನು 2008ರಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆ ಆರಂಭದಲ್ಲಿ ಕೇವಲ ಮೂರರಿಂದ ಐದು ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾಗಿತ್ತು. ಆದ್ರೆ ಇದೀಗ ಹತ್ತು ಸಾವಿರ ಕೋಟಿಗೂ ಮಿಗಿಲಾಗಿ ವೆಚ್ಚ ಮೀರಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಇದನ್ನು ರಾಜ್ಯದ ಮೊಟ್ಟ ಮೊದಲ ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಿದೆ. ಆದರೆ ನೆರೆಯ ಆಂಧ್ರಪ್ರದೇಶದ ಖ್ಯಾತೆಯಿಂದಾಗಿ, ಅವರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಗೆಜೆಟೆಡ್ ನೋಟಿಫಿಕೇಶನ್ ಪಾಸ್ ಮಾಡಲು ಹಿಂದೇಟು ಹಾಕುತ್ತಿರೋದು ವಿಪರ್ಯಾಸ ಎನಿಸಿದೆ. ಹೀಗಾಗಿ ಎಚ್ಚೆತ್ತಿರೋ‌ ಚಿತ್ರದುರ್ಗ ಬಿಜೆಪಿ‌ ಹಿರಿಯ ಶಾಸಕ ತಿಪ್ಪಾರೆಡ್ಡಿ, ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಿಎಂ ಬೊಮ್ಮಾಯಿ ಬಳಿ ನಿಯೋಗ ತೆರಳಿ, ಪ್ರದಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರೀಯ ಯೋಜನೆಯನ್ನ ಹಿಂಪಡೆಯದಂತೆ ಮನವೊಲಿಸುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಒಂದೂವರೆ ದಶಕ ಕಳೆದರೂ ರಾಜ್ಯದ ಮೊಟ್ಟ ಮೊದಲ ರಾಷ್ಟ್ರೀಯ ಯೋಜನೆ ಇನ್ನೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇದರೆ ಬೆನ್ನಲ್ಲೇ ಆಂಧ್ರ ಸರ್ಕಾರದ ಕುತಂತ್ರ ಮಧ್ಯಕರ್ನಾಟಕದ ರೈತರ ನಿದ್ರೆ ಕೆಡಿಸಿದೆ. ಹೀಗಾಗಿ ಎರಡು ರಾಜ್ಯಗಳ ನಡುವೆ ಬಾರಿ ಸಂಘರ್ಷ ಎದುರಾಗುವ ಭೀತಿ ಶುರುವಾಗಿದ್ದೂ, ಇದು ಇನ್ಯಾವ ಹಂತಕ್ಕೆ ತಲುಪುವುದೋ ಕಾದು ನೋಡಬೇಕಿದೆ.

Related Video