ಬಯಲು ಸೀಮೆ ಜನರ ಕನಸು ನನಸು, ಭೂಮಿಗೆ ತಂಪೆರೆಯಲಿದ್ದಾಳೆ ಭದ್ರೆ..!
ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ಜಲಸಂಪನ್ಮೂಲ ಇಲಾಖೆ ಟೊಂಕ ಕಟ್ಟಿ ನಿಂತಿದೆ. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇದಕ್ಕೆ ಬೇಕಾದ ಸಕಲ ಸಹಕಾರ ನೀಡುತ್ತಿದ್ದಾರೆ.
ಬೆಂಗಳೂರು (ಅ. 15): ನೀರಾವರಿ ಕ್ಷೇತ್ರದ ಅಭಿವೃದ್ಧಿಗಾಗಿ ಜಲಸಂಪನ್ಮೂಲ ಇಲಾಖೆ ಟೊಂಕ ಕಟ್ಟಿ ನಿಂತಿದೆ. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇದಕ್ಕೆ ಬೇಕಾದ ಸಕಲ ಸಹಕಾರ ನೀಡುತ್ತಿದ್ದಾರೆ. ಇದೀಗ ಭದ್ರಾ ಮೇಲ್ದಂಡೆ ಯೋಜನೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
29.90 ಟಿಎಂಸಿ ನೀರನ್ನು ಚಿಕ್ಕಮಗಳೂರು, ತುಮಕೂರು, ದಾವಣಗೆರೆ ಹಾಗೂ ಚಿತ್ರದುರ್ಗಕ್ಕೆ ನೀರು ಹರಿಸುವ ಯೋಜನೆ ಇದು. ಭದ್ರಾ ಮೇಲ್ದಂಡೆ ಯೋಜನೆ 2008 ರಲ್ಲಿ ಚಾಲನೆ ಪಡೆಯಿತು. ಭೂಸ್ವಾದೀನ ಪ್ರಕ್ರಿಯೆ, ಅರಣ್ಯ ಪ್ರದೇಶದ ಅಡಚಣೆಯಿಂದ ಇದು ಕುಂಠುತ್ತಾ ಸಾಗಿತು. ಇದೀಗ ಭದ್ರಾ ಮೇಲ್ದಂಡೆ ಯೋಜನೆಗೆ ಬಿರುಸಿನ ಚಾಲನೆ ಸಿಕ್ಕಿದ್ದು, 4 ಜಿಲ್ಲೆಗಳ ಕೆರೆ ತುಂಬಿಸುವುದು, ಅಂತರ್ಜಲ ಮಟ್ಟ ಹೆಚ್ಚಿಸುವುದು, ಕುಡಿಯುವ ನೀರು, ಕೃಷಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ.