ಅಹಿಂದ ದಾಳ ಬಳಕೆಗೆ ಮುಂದಾದ್ರಾ ಸಿಎಂ ? ಒಕ್ಕಲಿಗ, ಲಿಂಗಾಯತರ ವಿರುದ್ಧ ಅಹಿಂದ ಕೌಂಟರ್ !
ಲೋಕಸಭೆ ಚುನಾವಣೆ ಹೊತ್ತಲ್ಲೇ ಜಾತಿಗಣತಿ ದಂಗಲ್..!
ಹಿಂದುಳಿದ,ದಲಿತ ಮುಖಂಡರ ನೇತೃತ್ವದಲ್ಲಿ ಸಮಾವೇಶ
ಸಂಕ್ರಾಂತಿ ಬಳಿಕ ಅಹಿಂದ ಸಮಾವೇಶಕ್ಕೆ ಸಿಎಂ ಸಿದ್ಧತೆ
ಲೋಕಸಭೆ ಚುನಾವಣೆ ಹೊತ್ತಲ್ಲೇ ಜಾತಿಗಣತಿ ದಂಗಲ್ ಶುರುವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ(Congress government) ಜಾತಿಗಣತಿ ಅಸ್ತ್ರ ಕಂಟಕವಾಗುವ ಸಾಧ್ಯತೆ ಇದೆ. ಜಾತಿಗಣತಿ ವಿರುದ್ಧ ಒಕ್ಕಲಿಗ, ಲಿಂಗಾಯತರು(Lingayats) ಸಿಡಿದೆದ್ದಿದ್ದಾರೆ. ಅಹಿಂದ ದಾಳದ ಬಳಕೆಗೆ ಸಿಎಂ ಸಿದ್ಧರಾಮಯ್ಯ ಮುಂದಾದಂತೆ ಕಾಣುತ್ತಿದೆ. ಒಕ್ಕಲಿಗ, ಲಿಂಗಾಯತರ ವಿರುದ್ಧ ಅಹಿಂದ ಕೌಂಟರ್ ನೀಡುವ ಸಾಧ್ಯತೆ ಇದ್ದು, ಅಹಿಂದ ಸಮುದಾಯಗಳಿಂದ ಭರ್ಜರಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ(Chitradurga) ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೋಷಿತ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ಸಮಾವೇಶ ಮಾಡಲಾಗುತ್ತಿದೆ. ಕಾಂತರಾಜು ವರದಿ(Kantaraju report) ಬಿಡುಗಡೆಗೆ ಒತ್ತಾಯಿಸಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಬಳಿ ಸಮಾವೇಶಕ್ಕೆ ಪ್ಲಾನ್ ಮಾಡಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಹಿಂದುಳಿದ ವರ್ಗಗಳ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷರಿಂದ ಸ್ಥಳ ಪರಿಶೀಲನೆ ಮಾಡಲಾಯಿತು. ಜನವರಿ 20 ರಿಂದ 25ರೊಳಗೆ ಸಮಾವೇಶ ನಡೆಯುವ ಸಾಧ್ಯತೆ ಇದ್ದು, ಅಹಿಂದ ಸಮಾವೇಶದ ಮೂಲಕ ರಾಜಕೀಯ ವಿರೋಧಿಗಳಿಗೆ ಸಿಎಂ ಠಕ್ಕರ್..? ಕೊಡಲು ಚಿಂತಿಸುತ್ತಿದ್ದಾರೆ. ಚಿತ್ರದುರ್ಗಕ್ಕೆ ಭೇಟಿ ನೀಡಿ ಸಿಎಂ ಆಪ್ತರಿಂದ ಸಮಾವೇಶದ ಸಮಾಲೋಚನೆ ನಡೆಸಲಿದ್ದಾರೆ.
ಇದನ್ನೂ ವೀಕ್ಷಿಸಿ: ಸಂಸಂತ್ ಒಳಗೆ 3 ಸಂಚು ರೂಪಿಸಿದ್ದಾಗಿ ಬಾಯ್ಬಿಟ್ರಾ ಆರೋಪಿಗಳು..? ಬಗೆದಷ್ಟು ಬಯಲಾಗ್ತಿದೆ ಭಯಾನಕ ಸತ್ಯ !