ಕರಾವಳಿಯಲ್ಲಿ ಮತ್ತೆ ಹರಿದ ಬಿಜೆಪಿ ಮುಖಂಡನ ರಕ್ತ: ರಾಜ್ಯದಲ್ಲಿ ಹಿಂದೂಗಳ ಸಾವಿಗೆ ಬೆಲೆಯೇ ಇಲ್ವಾ?

Praveen Nettaru Murder: ಹಿಜಾಬ್, ಧರ್ಮ ದಂಗಲ್ ವಿವಾದಗಳಿಂದ ಕೊತ ಕೊತ ಕುದಿಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಕೆಲ ದಿನಗಳಿಂದ ಸೈಲೆಂಟ್ ಆಗಿತ್ತು. ಆದ್ರೆ ನಿನ್ನೆ ರಾತ್ರಿ ಮತ್ತೆ ಕರಾವಳಿ ಸಹಜ ಜೀವನಕ್ಕೆ ಬೆಂಕಿ ಬಿದ್ದಿದೆ

First Published Jul 27, 2022, 10:56 PM IST | Last Updated Jul 27, 2022, 10:57 PM IST

ಮಂಗಳೂರು (ಜು. 27): ಹಿಜಾಬ್, ಧರ್ಮ ದಂಗಲ್ ವಿವಾದಗಳಿಂದ ಕೊತ ಕೊತ ಕುದಿಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಕೆಲ ದಿನಗಳಿಂದ ಸೈಲೆಂಟ್ ಆಗಿತ್ತು. ಆದ್ರೆ ನಿನ್ನೆ ರಾತ್ರಿ ಮತ್ತೆ ಕರಾವಳಿ ಸಹಜ ಜೀವನಕ್ಕೆ ಬೆಂಕಿ ಬಿದ್ದಿದೆ. ಅಪರಿಚಿತರ ಗುಂಪೊಂದು ಬಿಜೆಪಿ ಯುವ ಮುಖಂಡನ ಹತ್ಯೆಮಾಡಿದ್ದು ಕರಾವಳಿ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಇನ್ನೇನು ತನ್ನ ಕೋಳಿ ಅಂಗಡಿ ಮುಚ್ಚಿ ಮನೆ ಕಡೆ ಹೊರಬೇಕಿತ್ತು. ಆಗ ತಾನೇ ಅಂಗಡಿ ಶೆಟರ್ ಎಳೆದು ಲಾಕ್ ಮಾಡುತ್ತಿರುವಾಗಲೇ ಬೈಕ್‌ನಲ್ಲಿ ಬಂದ ಮೂವರು ಹಂತಕರು ಪ್ರವೀಣ್ ಮೇಲೆ ಮಾರಕಾಸ್ತ್ರ ಬೀಸಿದ್ದಾರೆ. ಚಪ್ಪಲಿ ಬಿಟ್ಟು ಓಡೋ ಪ್ರಯತ್ನ ಮಾಡಿದ್ದಾರೆ. ಬಟ್, ಹಂತಕರು ಬಿಡಲಿಲ್ಲ, ಮರಾಕಾಸ್ತ್ರದಿಂದ ದಾಳಿ ನಡೆಸಿ ಪ್ರವೀಣ್ ನೆಲಕ್ಕುರುಳಿಸಿ ಎಸ್ಕೇಪ್ ಆಗಿದ್ದರು. 

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು.. ಆದರೂ ಪ್ರವೀಣ್ ಬದುಕುಳಿಯಲಿಲ್ಲ. ಯಾವಾಗ ಬಿಜೆಪಿ ಯುವ ಮುಖಂಡನ ಹತ್ಯೆಯಾಯ್ತೋ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆದಿತ್ತು. ಅಮಾಯಕನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ರು. ಅಲ್ಲದೇ ನಗರದಲ್ಲಿ ತಾವೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ರು. 

ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಪ್ರವೀಣ್ ಅಂತಿಮ ದರ್ಶನ ವೇಳೆ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ರು. ಹಂತಕರನ್ನು ಪತ್ತೆ ಹಚ್ಚಿ ಶಿಕ್ಷಿಸಿ ಎಂದು ಘೋಷಣೆ ಕೂಗಿದ್ರು. ಪರಿಸ್ಥಿತಿ ಹದಗೆಡುತ್ತಿದ್ದಂತೆ ಪೊಲೀಸರು ಕಾರ್ಯಕರ್ತರ ಮೇಲೆಯೇ ಲಾಠಿಚಾರ್ಜ್ ಮಾಡಿದ್ರು. ಯಾವಾಗ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ರೂ ಹಿಂದೂ ಕಾರ್ಯಕರ್ತರ ತಲೆಗೆ ಗಭೀರ ಗಾಯಗಳಾಯ್ತು. 

ಪ್ರವೀಣ್ ಹತ್ಯೆ ಖಂಡಿಸಿ ಸಾಮೂಹಿಕ ರಾಜಿನಾಮೆಗೆ ಮುಂದಾದ ಚಿಕ್ಕಮಗಳೂರು ಯುವ ಮೋರ್ಚಾ ಸದಸ್ಯರು

ಇದೆಲ್ಲವುದರ ಬಳಿಕ ಪುತ್ತೂರಿನಿಂದ ಬೆಳ್ಳಾರೆವರೆಗೂ ಪ್ರವೀಣ್ ಅಂತಿಮ ಯಾತ್ರೆ ಮಾಡಲಾಯ್ತು. ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ಇನ್ನು ಮಗನನ್ನ ಕಳೆದುಕೊಂಡ ಪ್ರವೀಣ್ ತಾಯಿಗೆ ಆಕಾಶವೇ ಬಿದ್ದಂತಾಗಿದೆ. 31 ವರ್ಷದ ಹಿಂದೆ ಮದುವೆಯಾಗಿದ್ದ ಮಗ ಕೊಲೆಯಾಗಿದ್ದಾನೆ ಅನ್ನೋ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಮಗನನ್ನ ವಾಪಸ್ ಕೊಡಿಸಿ ಅಂತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು

ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಪ್ರವೀಣ್, ಅಪ್ಪ-ಅಮ್ಮನ ಆಸೆಯಂತೆ ಹೊಸ ಮನೆ ಕಟ್ಟಿಸೋ ಕನಸು ಕಂಡಿದ್ದರು.. ಮನೆ ಕಟ್ಟಿಸಲು ಜಾಗ ಕೂಡ ರೆಡಿ ಮಾಡಿದ್ದರು.. ಅಷ್ಟರಲ್ಲಿ ಹಂತಕರು ಪ್ರವೀಣ್ ಜೀವ ಬಲಿ ಪಡೆದಿದ್ದಾರೆ.. ಹೊಸ ಮನೆ ಕಟ್ಟಿಸಲು ಸಿದ್ಧತೆ ನಡೆಸಿದ್ದ ಜಾಗದಲ್ಲೇ ಪ್ರವೀಣ್ ಅಂತ್ಯಕ್ರಿಯೆ ನಡೆಸಿದ್ರು.. ಬಿಲ್ಲವ್ ಸಂಪ್ರದಾಯದಂತೆ ವಿಧಿವಿಧಾನ ನಡೆಸಿ, ಅಳಿಯನ ಚಿತೆಗೆ ಮಾವ ಅಗ್ನಿಸ್ಪರ್ಶ ಮಾಡಿದ್ರು.

ವಾಯ್ಸ್: ಪ್ರವೀಣ್ ಹತ್ಯೆ ಬೆನ್ನಲ್ಲೇ ಪೊಲೀಸರು ನಿನ್ನೆಯಿಂದಲೇ ಹಂತಕರ ಬೇಟೆ ಆರಂಭಿಸಿದ್ರು.. ಕೇರಳದಿಂದ ಬಂದವರು ಕೊಲೆ ಮಾಡಿದ್ರಾ ಅನ್ನೋ ಚರ್ಚೆಗಳು ನಡೆಯುತ್ತಿವೆ. ಇದೆಲ್ಲಾ ದೃಷ್ಟಿಯಿಂದ ತನಿಖೆಗಿಳಿದ ಪೊಲೀಸರು ಹಂತಕರಿಗಾಗಿ ಕೇರಳದಲ್ಲೂ ಶೋಧ ನಡೆಸುತ್ತಿದ್ದಾರೆ, ಈಗಾಗಲೇ 10ಕ್ಕೂ ಹೆಚ್ಚು ಮಂದಿ ವಶಕ್ಕೆ ಪಡೆಯಲಾಗಿದೆ ಎಂದ ಗೃಹ ಸಚಿವರು, ಪೊಲೀಸರು ಹೇಳಿದ್ರೆ ಎನ್ಐಎ ತನಿಖೆಗೆ ನೀಡೋಕು ರೆಡಿ ಎಂದ್ರು. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ಕೊಲೆಗಳು ಮುಂದುವರೆಯುತ್ತಲೇ ಇದೆ. ಪೊಲೀಸರು ತಮ್ಮ ಖಡಕ್ ಕಾರ್ಯಾಚರಣೆ ಮೂಲಕ ಇಂಥ ಹತ್ಯಾಕಾಂಡಕ್ಕೆ ಫುಲ್‌ ಸ್ಟಾಪ್ ಹಾಕಬೇಕಿದೆ. 

Video Top Stories