ಪ್ರವೀಣ್ ಹತ್ಯೆ ಖಂಡಿಸಿ ಸಾಮೂಹಿಕ ರಾಜಿನಾಮೆಗೆ ಮುಂದಾದ ಚಿಕ್ಕಮಗಳೂರು ಯುವ ಮೋರ್ಚಾ ಸದಸ್ಯರು
ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಸಿಡಿದೆದ್ದಿದೆ. ಸಾಮೂಹಿಕ ರಾಜೀನಾಮೆಗೆ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಮುಂದಾಗಿದೆ. ಕಾರ್ಯಕರ್ತರ ರಕ್ಷಣೆಗೆ ಮುಂದಾಗದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು (ಜು. 28): ಕೆಲವೇ ಕ್ಷಣಗಳಲ್ಲಿ ಪ್ರವೀಣ್ ಮೃತದೇಹ ಸ್ವಗ್ರಾಮ ಬೆಳ್ಳಾರೆಗೆ ತಲುಪಲಿದೆ. ಬೆಳ್ಳಾರೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿ, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
'ನಮ್ಮ ಪ್ರವೀಣ್ ಎಲ್ಲೆ ಸಮಸ್ಯೆ ಇದ್ದರೂ ಸ್ಪಂದಿಸುತ್ತಿದ್ದ. ಯಾರೇ ಕಷ್ಟ ಅಂದರೂ ಸಹಾಯ ಮಾಡುತ್ತಿದ್ದ. ಕೊರೋನಾ ವೇಳೆ ಮನೆ ಮನೆ ದಿನಸಿ ಹಂಚಿದ್ದ. ಮನೆಯಲ್ಲಿ ಬಡತನವಿತ್ತು, ಸಾಲ ಮಾಡಿ ಕೋಳಿ ಅಂಗಡಿ ತೆಗೆದಿದ್ದ' ಎಂದು ಪ್ರವೀನ್ ಮಾವ ರಂಗಪೂಜಾರಿ ಹೇಳಿದ್ದಾರೆ.
ಪ್ರವೀಣ್ ಮೃತದೇಹದ ಮೆರವಣಿಗೆ: SDPI, PFI ಧ್ವಜಗಳ ತೆರವು, ಅಂತಿಮ ದರ್ಶನಕ್ಕೆ ವ್ಯವಸ್ಥೆ
'ಕೋಮುವಾದ ಸಿದ್ದಾಂತಗಳಿಂದಾಗಿ ದೇಶದಲ್ಲಿ ದ್ವೇಷ ಹೆಚ್ಚಾಗಿದೆ. ಸರ್ಯಾರ ಯಾರ ಪರವಾಗಿಯು ನಿಲ್ಲಬಾರದು. ಸ್ಪಷ್ಟ ತನಿಖೆ ನಡೆಯಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಸಿಡಿದೆದ್ದಿದೆ. ಸಾಮೂಹಿಕ ರಾಜೀನಾಮೆಗೆ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಮುಂದಾಗಿದೆ. ಕಾರ್ಯಕರ್ತರ ರಕ್ಷಣೆಗೆ ಮುಂದಾಗದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.