Asianet Suvarna News Asianet Suvarna News

ಬೆಳಗಾವಿ ಆಯ್ತು, ಈಗ ಮೈಸೂರಲ್ಲಿ ಚಿರತೆ ಕಾಟ: ಸ್ಥಳೀಯರಿಗೆ ಆತಂಕ, ಕೇಂದ್ರೀಯ ವಿದ್ಯಾಲಯಗೆ ರಜೆ

Leopard spotted in Mysuru RBI Campus: ಬೆಳಗಾವಿ ಬಳಿಕ ಈಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿರತೆ ಕಾಟ ಶುರುವಾಗಿದೆ

Sep 9, 2022, 7:22 PM IST

ಮೈಸೂರು (ಸೆ. 09): ಬೆಳಗಾವಿ ಬಳಿಕ ಈಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ಚಿರತೆ ಕಾಟ ಶುರುವಾಗಿದೆ. ಮೈಸೂರಿನ ಮೇಟಗಳ್ಳಿಯ ನೋಟು ಮುದ್ರಣಾಲಯ ಸುತ್ತ ಚಿರತೆಗಳು ಬೀಡು ಬಿಟ್ಟಿದ್ದು ಆರ್‌ಬಿಐ (RBI) ನೌಕರರಿಗೆ ಚಿರತೆ ಭಯ ಶುರುವಾಗಿದೆ.  ಕಳೆದ ಎರಡು ವಾರದಿಂದ ಚಿರತೆ ಸಂಚಾರದಿಂದ ಆರ್‌ಬಿಐ ನೌಕರರು, ಕುಟುಂಬಸ್ಥರು ಭಯ ಭೀತರಾಗಿದ್ದಾರೆ.  ಎರಡು ಮರಿಗಳೊಂದಿಗೆ ತಾಯಿ ಚಿರತೆ ಸಂಚರಿಸುತ್ತಿದೆ.  ಚಿರತೆ ಕಂಡು ನೌಕರರು ಕಂಗೆಟ್ಟಿದ್ದಾರೆ. ಈಗಾಗಲೇ  ಬೀದಿ ನಾಯಿಗಳನ್ನು ಚಿರತೆ ಎಳೆದೊಯ್ದಿದ್ದು, ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಜನರು ಮನೆಯಿಂದ ಹೊರಗೆ ಬರಲೂ ಭಯ ಪಡುವಂತಾಗಿದ್ದು ಕೇಂದ್ರೀಯ ವಿದ್ಯಾಲಯಕ್ಕೆ ವಾರದಿಂದ ರಜೆ ನೀಡಲಾಗಿದೆ.  ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು,  ಎರಡು ಕಡೆ ಬೋನ್ ಇಟ್ಟರೂ ಚಿರೆತೆ ಇನ್ನೂ ಸೆರೆಯಾಗಿಲ್ಲ.

Belagavi Leopard News: 24 ದಿನ ಕಳೆದ್ರೂ ಪತ್ತೆಯಾಗದ ಚಿರತೆ: ಕಾಂಗ್ರೆಸ್‌ ಕಾರ್ಯಕರ್ತೆಯರಿಂದ ಹೈಡ್ರಾಮ!