ಮಡಿಕೇರಿಯಲ್ಲಿ ವೆಂಕಟ್ ಹುಚ್ಚಾಟ...ಕಾರಿನ ಗಾಜು ಪುಡಿ ಪುಡಿ

ಮಡಿಕೇರಿ[ಆ. 29]   ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಕನ್ನಡದ ನಟ ಹುಚ್ಚ ವೆಂಕಟ್‌ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ‘ರಾಂಧವ’ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅವರ ರಕ್ಷಣೆ ಮಾಡಲಾಗಿತ್ತು. ಜನರು ಮತ್ತು ಅಭಿಮಾನಿಗಳಿಗೆ ಒಂದು ರೀತಿಯ ಸಹಾನುಭೂತಿಯೂ ಮೂಡಿತ್ತು. ಆದರೆ ಮಡಿಲಕೇರಿಯಲ್ಲಿ ಹುಚ್ಚ ವೆಂಕಟ್ ಇದೀಗ ರಂಪಾಟ ನಡೆಸಿದ್ದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

Share this Video
  • FB
  • Linkdin
  • Whatsapp

ಮಡಿಕೇರಿ[ಆ. 29] ಚೆನ್ನೈನ ಒಡಪಳನಿ ಎನ್ನುವ ಬಡಾವಣೆಯಲ್ಲಿ ಕನ್ನಡದ ನಟ ಹುಚ್ಚ ವೆಂಕಟ್‌ ಅವರು ಹುಚ್ಚನ ರೀತಿ ತಿರುಗುತ್ತಿರುವ ದೃಶ್ಯಗಳನ್ನು ‘ರಾಂಧವ’ ಚಿತ್ರತಂಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಅವರ ರಕ್ಷಣೆ ಮಾಡಲಾಗಿತ್ತು. ಜನರು ಮತ್ತು ಅಭಿಮಾನಿಗಳಿಗೆ ಒಂದು ರೀತಿಯ ಸಹಾನುಭೂತಿಯೂ ಮೂಡಿತ್ತು. ಆದರೆ ಮಡಿಲಕೇರಿಯಲ್ಲಿ ಹುಚ್ಚ ವೆಂಕಟ್ ಇದೀಗ ರಂಪಾಟ ನಡೆಸಿದ್ದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

ಮಡಿಕೇರಿಯಲ್ಲಿ ಹುಚ್ಚ ವೆಂಕಟ್​ ಹುಚ್ಚಾಟ-ರಂಪಾಟ ನಡೆಸಿದ್ದಾರೆ. ಮಧ್ಯ ದಾರಿಯಲ್ಲಿ ಮನಸೋ ಇಚ್ಛೆ ವರ್ತನೆ ಮಾಡಿದ್ದು ಕಾರೊಂದನ್ನು ಪುಡಿ ಪುಡಿ ಮಾಡಿದ್ದಾರೆ.ಮಡಿಕೇರಿ ನಗರದ KSRTC ಡಿಪೋ ಬಳಿ ಘಟನೆ ನಡೆದಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನ ಗ್ಲಾಸ್ ಒಡೆದು ಪುಂಡಾಟ ಮೆರೆದ ವೆಂಕಟ್ ಗೆ ಸ್ಥಳೀಯರು ಗೂಸಾ ನೀಡಿದ್ದಾರೆ.

ವೆಂಕಟ್ ಸರಿ ಹೋದರು.. ಅವರನ್ನು ರಕ್ಷಣೆ ಮಾಡಲಾಗಿದೆ ಎಂಬ ಸುದ್ದಿಗಳ ನಡುವೆ ಮತ್ತೆ ಅವರ ರಂಪಾಟವೇ ಸುದ್ದಿಯಾಗಿದೆ. ಹಿಂದೆ ಖಾಸಗಿ ವಾಹಿನಿಯೊಂದರ ಶೋನಲ್ಲಿ ಹುಚ್ಚಾಟ ಮೆರೆದಿದ್ದ ವೆಂಕಟ್ ಸ್ಯಾಂಡಲ್ ವುಡ್ ನಲ್ಲಿ ಅನೇಕ ಹೊಸ ಪ್ರಯೋಗ ಮಾಡಿದ್ದಾರೆ.

Related Video