ಸಾವಿನ ಟಿಟಿ ಬಗ್ಗೆ ಪ್ರತ್ಯಕ್ಷದರ್ಶಿ ಹೇಳೋದೇನು..? ಈ ಅಪಘಾತದ ಹಿಂದಿರೋ ಸತ್ಯಾಸತ್ಯತೆ ಏನು..?

ಹೆಣಗಳ ಮಧ್ಯೆಯೇ ಬಾಲಕನ ನರಳಾಟ..! 
ಹೆದ್ದಾರಿಯಲ್ಲಿ ಜವರಾಯನ ಸಾವಿನ ಆಟ..!
ಜನರ ಪಾಲಿಗೆ ಆಗಿತ್ತು ಇದು ಸಾವಿನ ಟಿಟಿ..!

First Published Jun 29, 2024, 8:56 AM IST | Last Updated Jun 29, 2024, 8:56 AM IST

ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ(Accident) ಒಬ್ಬರು ಸೀಟಿನಡಿಯಲ್ಲಿ ಅಪ್ಪಚ್ಚಿಯಾಗಿ ಹೋಗಿದ್ರೆ, ಇನ್ನು ಕೆಲವರು ಕೂತ ಸೀಟಿನಲ್ಲೇ ಶವವಾಗಿ ಹೋಗಿದ್ದಾರೆ. ಮತ್ತೆ ಕೆಲವರು ಒಬ್ಬರ ಮೇಲೆ ಒಬ್ಬರು ಬಿದ್ದು ಅಲ್ಲೇ ಹೆಣವಾಗಿ ಹೋಗಿದ್ದಾರೆ. ಇವರ ಈ ಮೃತ ದೇಹವನ್ನ ಹೊರ ತೆಗೆಯುವುದೇ ದೊಡ್ಡ ಸಾಹಸದ ಕೆಲಸವಾಗಿತ್ತು. ಬೆಳ್ಳಂಬೆಳಿಗ್ಗೆ 5 ಗಂಟೆಗೆ ಪೊಲೀಸರು ಹಾಗೂ ಕೆಲ ರಕ್ಷಣಾದಳದವರು ತಕ್ಷಣವೇ ಘಟನಾ ಸ್ಥಳಕ್ಕೆ ಬಂದು, ಟಿಟಿಯಲ್ಲಿರುವವರ ದೇಹವನ್ನ ಹೊರ ತೆಗೆದಿದ್ದಾರೆ. ಕೊನೆಯುಸಿರು ಹಿಡಿದುಕೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದವರನ್ನ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ( Bengaluru-Pune National Highway) ಬೆಳ್ಳಂಬೆಳಿಗ್ಗೆ ನಡೆದ ದುರ್ಘಟನೆ ಇದು. ಈ ಘಟನೆಯ ಸ್ವರೂಪ ನೋಡ್ತಿದ್ರೆ, ಆ ಜವರಾಯನಿಗೆ ದಯೇಯೇ ಇಲ್ಲ ಅಂತ ಅನಿಸಿಬಿಡುತ್ತೆ. ಈಗ ಊರಲ್ಲಿರುವ ಇವರ ಸಂಬಂಧಿಕರು ಕಥೆ ಹೇಗಾಗಿರಬೇಡ. ಅದರಲ್ಲೂ ಒಮ್ಮಲೆ 13 ಜನರನ್ನ ಕಳೆದುಕೊಂಡು ಎಲ್ಲರೂ ಶಾಕ್‌ನಲ್ಲಿ ಇದ್ದಾರೆ. ಅಸಲಿಗೆ ಮೃತರ ಪೈಕಿ ಆದರ್ಶ್ ಅನ್ನುವವರು ಕಳೆದ ಒಂದುವರೆ ತಿಂಗಳ ಹಿಂದೆ ಹೊಸ ಟಿಟಿಯನ್ನ ಖರೀದಿ ಮಾಡಿದ್ದಾರೆ. ಅದರಲ್ಲಿ ತಮ್ಮ ಕುಟುಂಬದವರನ್ನ ಹಾಗೂ ಕೆಲ ಸ್ನೇಹಿತರನ್ನ ಕರೆದುಕೊಂಡು ದೇವರ ಪೂಜೆ ಸಲ್ಲಿಸಲೆಂದು ಪ್ರವಾಸಕ್ಕೆ ಹೊರಟಿದ್ದಾರೆ. ಸೋಮವಾರ ಸುಮಾರು 12 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ದೇವಸ್ಥಾನವನ್ನ ತಲುಪಿದ್ದಾರೆ. ಅಲ್ಲಿ ವಾಹನ ಪೂಜೆ ಮಾಡಿಸಿ ಬಳಿಕ ತುಳಜಾಭವಾನಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದಿದ್ದಾರೆ. ಆ ನಂತರ ಕಲಬುರ್ಗಿಯ ಜಿಲ್ಲೆಯ ಚಿಂಚೋಳ್ಳಿ ಮಾಯಮ್ಮನ ದೇವಸ್ಥಾನಕ್ಕೆ ಹೋಗಿದ್ದಾರೆ. ಆದರ್ಶ್ ಇದನ್ನು ತಮ್ಮ ವಾಟ್ಸ್ ಅಪ್ ಸ್ಟೇಟಸ್‌ನಲ್ಲಿ ಕೂಡ ಹಾಕಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಕರ್ಕಟಕ ರಾಶಿಗೆ ಬುಧನ ಪ್ರವೇಶವಾಗಲಿದ್ದು, ಇದರಿಂದ ದೊರೆಯುವ ಫಲವೇನು ಗೊತ್ತಾ ?