ಮಂಗಳೂರು ವಿವಿಯಲ್ಲಿ ಡಾ.ಶಂಸುಲ್‌ ಇಸ್ಲಾಂ ಉಪನ್ಯಾಸ: ವಿರೋಧಿಸಿ ಎಬಿವಿಪಿ ಪ್ರತಿಭಟನೆ

ದೆಹಲಿ ವಿವಿ ನಿವೃತ್ತ ಪ್ರೊಫೆಸರ್ ಡಾ.ಶಂಸುಲ್‌ ಇಸ್ಲಾಂ ಉಪನ್ಯಾಸವನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಮಂಗಳೂರು ವಿವಿ ಕಾಲೇಜಿಗೆ ಮುತ್ತಿಗೆ ಹಾಕಿದ್ದಾರೆ.
 

Share this Video
  • FB
  • Linkdin
  • Whatsapp

ಮಂಗಳೂರು: ದೆಹಲಿ ವಿವಿ ನಿವೃತ್ತ ಪ್ರೊಫೆಸರ್ ಡಾ.ಶಂಸುಲ್‌ ಇಸ್ಲಾಂ(DR.shamsul Islams)ಉಪನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಉಪನ್ಯಾಸ ವಿರೋಧಿಸಿ ಮಂಗಳೂರು ವಿವಿ(Mangaluru University) ಕಾಲೇಜಿಗೆ ABVP ಮುತ್ತಿಗೆ ಹಾಕಲು ಯತ್ನಿಸಿದೆ. ಹಂಪನಕಟ್ಟೆ ಬಳಿಯ ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ. ಗೇಟ್ ಬಳಿ ABVP ಕಾರ್ಯಕರ್ತರನ್ನು ಪೊಲೀಸರು(Police) ತಡೆದಿದ್ದಾರೆ. ABVP ಕಾರ್ಯಕರ್ತರು, ಪೊಲೀಸರ ಮಧ್ಯೆ ನೂಕಾಟ ತಳ್ಳಾಟ ನಡೆದಿದೆ. ಅಲ್ಲದೇ ABVP ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಶಂಸುಲ್ ಗೋ ಬ್ಯಾಕ್ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಈಗಾಗಲೇ ಬೇರೆ ದಾರಿ ಮೂಲಕ ಡಾ.ಶಂಸುಲ್ ಕಾಲೇಜು ಆವರಣ ಪ್ರವೇಶಿಸಿದ್ದಾರೆ. ಕಾಲೇಜಿನ ಒಳಗೆ ನಡೆಯುವ ಕಾರ್ಯಕ್ರಮ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 - ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿರೋಧದ ನಡುವೆಯೂ ಬಿ.ವಿ ಕಕ್ಕಿಲ್ಲಾಯ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. 

ಇದನ್ನೂ ವೀಕ್ಷಿಸಿ: News Hour: ಕಾಂಗ್ರೆಸ್‌ ಕುದುರೆ ಕಟ್ಟಿಹಾಕಲು ಮೈತ್ರಿ ಹಗ್ಗ ಹಿಡಿದು ಬಂದ ಬಿಜೆಪಿ-ಜೆಡಿಎಸ್‌

Related Video