Asianet Suvarna News Asianet Suvarna News

ಬ್ಯಾಂಕ್‌ ನೌಕರಿ ಬಿಟ್ಟು ಗಾಣದ ಎಣ್ಣೆ ವ್ಯಾಪಾರೋದ್ಯಮ ಆರಂಭಿಸಿ ಯಶಸ್ಸು ಕಂಡ ಯುವೋದ್ಯಮಿ

- ಬ್ಯಾಂಕ್‌ ನೌಕರಿ ಬಿಟ್ಟು ಸ್ವಂತ ಉದ್ಯಮ ಆರಂಭಿಸಿದ ಯುವಕ

- ಕೋಟೆನಾಡಿನಲ್ಲಿ ಕೃಷಿಯಾಧಾರಿತ ಉದ್ಯಮಕ್ಕೆ ಕೈ ಹಾಕಿದ ಪ್ರಜ್ವಲ್

- ಗಾಣದ ಎಣ್ಣೆ ವ್ಯಾಪಾರೋದ್ಯಮ ಆರಂಭಿಸಿ ಯಶಸ್ಸು ಕಂಡ ಯುವೋದ್ಯಮಿ
 

ಚಿತ್ರದುರ್ಗ (ಸೆ. 03):  ಬರದನಾಡಿನಲ್ಲಿ ಕೃಷಿ ಅಂದ್ರೆ ಮೂಗು ಮುರಿಯೋರೇ ಹೆಚ್ಚು. ಇಲ್ಲೊಬ್ಬ ಪದವೀಧರ ಕೈನಲ್ಲಿದ್ದ ಖಾಸಗಿ ಬ್ಯಾಂಕ್ ಉದ್ಯೋಗ ತ್ಯಜಿಸಿ  ಬರದನಾಡಲ್ಲಿ ಕೃಷಿಯಾಧಾರಿತ ಉದ್ಯಮವೊಂದನ್ನು ಆರಂಭಿಸಿದ್ದಾರೆ. 

ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಪ್ರಜ್ವಲ್, ಕಳೆದ ವರ್ಷವಷ್ಟೇ ಅವರ ಬ್ಯಾಂಕ್  ಉದ್ಯೋಗಕ್ಕೆ ಗುಡ್ ಬೈ ಹೇಳಿ‌, ಗಾಣದ ಎಣ್ಣೆ ಉದ್ಯಮ ಆರಂಭಿಸಿದ್ರು. ದಲ್ಲಾಳಿಗಳ ಹಾವಳಿ ಇಲ್ಲದೇ ಹಾಗು ಕಮಿಷನ್ ದಂಧೆಯ ಮೋಸವಿಲ್ಲದೇ ರೈತರಿಂದ ನೇರವಾಗಿ, ಶೇಂಗಾ ಹಾಗು ಒಣಕೊಬ್ಬರಿಯನ್ನು ಖರೀದಿಸಿ,  ಅಡುಗೆಗೆ ಬಳಸುವ ಶೇಂಗಾ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯನ್ನು ಗಾಣದಿಂದಲೇ ತಯಾರಿಸುತ್ತಾರೆ. ಈ ಎಣ್ಣೆಗೆ  ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಹುಬೇಡಿಕೆಯಿದೆ. ವಿಶೇಷವೆಂದರೆ,  ಕಳೆದ ಒಂದು ವಾರದಿಂದ ಆಸ್ಟ್ರೇಲಿಯಾಕ್ಕೂ ಕೋಟೆನಾಡಿನ  ಗಾಣದ ಎಣ್ಣೆ ರಫ್ತಾಗುತ್ತಿದೆ‌. ಹೀಗಾಗಿ ಉದ್ಯಮದಿಂದ ಉತ್ತಮವಾದ ಲಾಭವು ಬರ್ತಾ ಇದೆ ಅಂತಾರೆ ಯುವ ಉದ್ಯಮಿ.

Video Top Stories