ಕಿಲ್ಲರ್ ಗುಂಡಿಯಿಂದ ಪಾರಾದ ಮಹಿಳೆ: ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿನೇ ಇಲ್ವಾ?
ನಗರದಲ್ಲಿ ರಸ್ತೆ ಗುಂಡಿಗಳಿಗೆ ಮುಕ್ತಿನೇ ಇಲ್ವಾ ಎಂಬ ಪ್ರಶ್ನೆ ಕಾಡತೊಡಗಿದೆ. ಮೊನ್ನೆಯಷ್ಟೇ ಹೆರೋಹಳ್ಳಿಯಲ್ಲಿ ರಸ್ತೆ ಗುಂಡಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ನಿನ್ನೆ (ಗುರುವಾರ) ಕಿಲ್ಲರ್ ಗುಂಡಿಯಿಂದ ಮಹಿಳೆ ಪಾರಾಗಿದ್ದಾಳೆ.
ಬೆಂಗಳೂರು (ಆ.26): ಸಿಲಿಕಾನ್ ಸಿಡಿಯಲ್ಲಿ ರಸ್ತೆ ಗುಂಡಿಗಳಿಗೆ ಮುಕ್ತಿನೇ ಇಲ್ವಾ ಎಂಬ ಪ್ರಶ್ನೆ ಕಾಡತೊಡಗಿದೆ. ಮೊನ್ನೆಯಷ್ಟೇ ಹೆರೋಹಳ್ಳಿಯಲ್ಲಿ ರಸ್ತೆ ಗುಂಡಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ನಿನ್ನೆ (ಗುರುವಾರ) ಕಿಲ್ಲರ್ ಗುಂಡಿಯಿಂದ ಮಹಿಳೆ ಪಾರಾಗಿದ್ದಾಳೆ. ಹೌದು! ನಗರದ ಕಸ್ತೂರಿ ನಗರ ಪ್ಲೈ ಓವರ್ ಬಳಿ ಮಹಿಳೆಯೊಬ್ಬಳು ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದಿದ್ದಾಳೆ. ಕಾರು ಬಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಹಿಳೆ ಸ್ಕಿಡ್ ಆಗಿ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಗುಂಡಿಯಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಇದರಿಂದಾಗಿ ಬಿಬಿಎಂಪಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.