Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ
ಬರೋಬ್ಬರಿ 900 ಕೆ.ಜಿ ಧಾನ್ಯಗಳನ್ನು ಬಳಸಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಭಿನ್ನ ತ್ರಿವರ್ಣ ಧ್ವಜದ ಕಲ್ಪನೆಯ ಚಿತ್ತಾರ ಬಿಡಿಸಲಾಗಿದೆ.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಭಿನ್ನವಾಗಿ ತ್ರಿವರ್ಣ ಧ್ವಜದ ಕಲ್ಪನೆ ಮೂಡಿಬಂದಿದೆ. ಬರೋಬ್ಬರಿ 900 ಕೆ.ಜಿ ಧಾನ್ಯಗಳನ್ನು ಬಳಸಿ ದೇವಸ್ಥಾನದ ಆವರಣದಲ್ಲಿ ತಿರಂಗ ಚಿತ್ತಾರ ಮಾಡಲಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಇದನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ್ದಾರೆ. ಗುರುಬೆಳದಿಂಗಳು ಟ್ರಸ್ಟ್‌ನ 30 ಸದಸ್ಯರ ಕೈಚಳಕದಲ್ಲಿ ತ್ರಿವರ್ಣ ಧ್ವಜ ಮೂಡಿಬಂದಿದೆ. ಈ ಚಿತ್ತಾರ ಬಿಡಿಸಲು 300ಕೆಜಿ ಸಾಗು , 300ಕೆಜಿ ಹೆಸರುಕಾಳು, 300 ಕೆಜಿ ಕೆಂಪು ತೊಗರಿ ಬಳಕೆ ಮಾಡಲಾಗಿದೆ. 38 ಫೀಟ್ ವೃತ್ತದಲ್ಲಿ 108 ಬಾಳೆ ಎಲೆ ಬಳಸಿ 54 ಕಳಶವಿಟ್ಟು ತಿರಂಗ ಅಲಂಕಾರ.
ಮಂಗಳೂರಿನಲ್ಲಿ ದಾಖಲೆ ಬರೆದ 900 ಕೆ.ಜಿ ತೂಕದ ತಿರಂಗ!
90 ಕೆ.ಜಿಯಷ್ಟು ಸಾಬಕ್ಕಿ, ಬೆಂಡೆಕಾಯಿ, ಮೂಲಂಗಿ, ಅಡಕೆ, ಕ್ಯಾರೆಟ್ ಬಳಕೆ. ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ಚಿತ್ರಾಕೃತಿ ರಚಿಸಲಾಗಿದೆ. ಬರೋಬ್ಬರಿ 12 ಗಂಟೆಗಳ ಶ್ರಮದಲ್ಲಿ ತಿರಂಗ ಕಲಾಕೃತಿ ನಿರ್ಮಾಣ ಮಾಡಲಾಗಿದ್ದು, ತಿರಂಗ ಕಲಾಕೃತಿ ಎದುರು ಜನ ಫೋಟೋ ಕ್ಲಿಕ್ಕಿಸಿಕೊಳ್ತಿದ್ದಾರೆ. ತಾಜಾ ತರಕಾರಿ, ಧಾನ್ಯ ಹಾಗೂ ಹೂಗಳನ್ನು ಬಳಸಿದ 1000 ಕೆ.ಜಿ ತೂಗುವ ಕಲಾಕೃತಿ ರಚನೆ ಮಾಡಲಾಗಿದೆ. ಸ್ವಾತಂತ್ರ್ಯೋತ್ಯವದ ಅಮೃತಮಹೋತ್ಸವ ಹಿನ್ನೆಲೆ ಈ ವಿಭಿನ್ನ ಪ್ರಯೋಗ ಮಾಡಲಾಗಿದ್ದು, ಕಲಾವಿದ ಹಾಗೂ ಛಾಯಾಗ್ರಾಹಕ ಪುನಿಕ್ ಶೆಟ್ಟಿ ಇದರ ನೇತೃತ್ವ ವಹಿಸಿದ್ದಾರೆ.