ಚಿತ್ರದುರ್ಗದ ಬಳಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ

*  ಚಿತ್ರದುರ್ಗ ಜಿಲ್ಲೆಯ ದುಮ್ಮಿ ಗ್ರಾಮದ ಬಳಿ ನಡೆದ ಘಟನೆ
*  ಒಂದೇ ಬೈಕ್‌ನಲ್ಲಿ ಇಬ್ಬರು ಮಕ್ಕಳೊಂದಿಗೆ ನಾಲ್ವರ ಪ್ರಯಾಣ
*  ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂಬ ಆರೋಪ 

Share this Video
  • FB
  • Linkdin
  • Whatsapp

ಚಿತ್ರದುರ್ಗ(ಮಾ.24): ರಾಜ್ಯದಲ್ಲಿ ಬಸ್‌ ಅಪಘಾತ ಪ್ರಕರಣಗಳು ಮುಂದುವರೆದಿವೆ. ಹೌದು, ಬೈಕ್‌ಗೆ ಖಾಸಗಿ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ದುಮ್ಮಿ ಗ್ರಾಮದ ಬಳಿ ಇಂದು (ಗುರುವಾರ) ನಡೆದಿದೆ. ನಾಗರಾಜ್‌, ಪತ್ನಿ ಶೈಲಜಾ ಮಕ್ಕಳಾದ ವಿರೇಶ್‌ ಹಾಗೂ ಸಂತೋಷ ಮೃತಪಟ್ಟಿದ್ದಾರೆ. ಒಂದೇ ಬೈಕ್‌ನಲ್ಲಿ ಇಬ್ಬರು ಮಕ್ಕಳೊಂದಿಗೆ ನಾಲ್ವರು ತೆರಳುತ್ತಿದ್ದರು. ಖಾಸಗಿ ಬಸ್‌ ಚಾಲಕನ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಏಕಾಏಕಿ ಬಲಾಭಾಗಕ್ಕೆ ಬಸ್‌ ನುಗ್ಗಿದ್ದರಿಂದ ದುರ್ಘಟನೆ ಸಂಭಿಸಿದೆ ಎಂದು ಹೇಳಲಾಗುತ್ತಿದೆ. 

ವಿದ್ಯಾರ್ಥಿನಿಯರಿಗೆ SSLC ಪರೀಕ್ಷೆ ಟೆನ್ಷನ್, ಹಿಜಾಬ್ ಧರಿಸಿ ಹೋಗುವಂತಿಲ್ಲ, ಪರೀಕ್ಷೆ ಬಿಡುವಂತಿಲ್ಲ!

Related Video