ಹೆಚ್ಚಿದ ಕೊರೋನಾರ್ಭಟ: ಬೆದರಿದ ಬೆಂಗಳೂರು..!
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚಳ|ಮನೆ ಬಿಟ್ಟು ಹೊರಗಡೆ ಬಂದರೆ ಆಪತ್ತು ಎದುರಾಗಲಿದೆ ಎಂಬ ಭಯ ನಗರದ ಜನತೆಯಲ್ಲಿ ಕಾಡುತ್ತಿದೆ| 142 ವಾರ್ಡ್‌ಗಳಲ್ಲಿ ಮಹಾಮಾರಿ ವೈರಸ್ ಅಟ್ಯಾಕ್|
ಬೆಂಗಳೂರು(ಜೂ.15): ನಗರದ ಜನತೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಹೌದು, ಕಳೆದ ಕೆಲವು ದಿನಗಳಿಂದ ನಗರದಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮನೆ ಬಿಟ್ಟು ಹೊರಗಡೆ ಬಂದರೆ ಆಪತ್ತು ಎದುರಾಗಲಿದೆ ಎಂಬ ಭಯ ನಗರದ ಜನತೆಯಲ್ಲಿ ಕಾಡುತ್ತಿದೆ. ಅಷ್ಟರ ಮಟ್ಟಿಗೆ ಕೊರೋನಾ ವೈರಸ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.
ಕೊಪ್ಪಳಕ್ಕೂ ಜಿಂದಾಲ್ ನಂಜು: ನೌಕರನ ತಂದೆ ತಾಯಿಗೆ ಕೊರೋನಾ ಶಂಕೆ
ನಗರದ ರಸ್ತೆ ರಸ್ತೆಗಳನ್ನ ಸೀಲ್‌ಡೌನ್ ಮಾಡಲಾಗುತ್ತಿದೆ. ನಗರದ 142 ವಾರ್ಡ್‌ಗಳಲ್ಲಿ ಮಹಾಮಾರಿ ವೈರಸ್ ಅಟ್ಯಾಕ್ ಮಾಡಿದೆ. ಬೆಂಗಳೂರಿನಲ್ಲಿರುವ ಒಟ್ಟು 198 ವಾರ್ಡ್‌ಗಳಲ್ಲಿ 142 ಕಂಟೈನ್‌ಮೆಂಟ್ ಝೋನ್‌ಗಳಾಗಿ ಮಾರ್ಪಟ್ಟಿವೆ. ಒಂದೇ ದಿನ ಹೊಸದಾಗಿ 32 ಕಂಟೈನ್‌ಮೆಂಟ್ ಝೋನ್‌ಗಳನ್ನ ಸೇರ್ಪಡೆ ಮಾಡಲಾಗಿದೆ.