ಕೊಪ್ಪಳಕ್ಕೂ ಜಿಂದಾಲ್‌ ನಂಜು: ನೌಕರನ ತಂದೆ ತಾಯಿಗೆ ಕೊರೋನಾ ಶಂಕೆ

ಜಿಂದಾಲ್‌ನಲ್ಲಿ ನೌಕರಿ ಮಾಡುತ್ತಿದ್ದ ವ್ಯಕ್ತಿ ತಂದೆ ತಾಯಿಗೂ ಸೋಂಕಿನ ಶಂಕೆ|ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿರುವ ದಂಪತಿ| ಮಕ್ಕಳಿಗೆ ಕೊರೋನಾ ಟೆಸ್ಟ್‌ನಲ್ಲಿ ನೆಗೆಟಿವ್‌, ತಂದೆ ತಾಯಿಗೆ ಪಾಸಿಟಿವ್‌ ಇದೆ ಎಂಬ ಶಂಕೆ|
 
 

First Published Jun 15, 2020, 2:56 PM IST | Last Updated Jun 15, 2020, 2:57 PM IST

ಕೊಪ್ಪಳ(ಜೂ.15): ಬಳ್ಳಾರಿ ಜಿಲ್ಲೆಯ ಜಿಂದಾಲ್‌ ಕಾರ್ಖಾನೆಯ ಕೊರೋನಾ ನಂಟು ಇದೀಗ ಕೊಪ್ಪಳ ಜಿಲ್ಲೆಗೂ ಹಬ್ಬಿದೆ. ಹೌದು, ಜಿಂದಾಲ್‌ನಲ್ಲಿ ನೌಕರಿ ಮಾಡುತ್ತಿದ್ದ ವ್ಯಕ್ತಿ ತಂದೆ ತಾಯಿಗೂ ಸೋಂಕಿನ ಶಂಕೆ ವ್ಯಕ್ತವಾಗುತ್ತಿದೆ. ನೌಕರನ ತಂದೆ ತಾಯಿ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿದ್ದಾರೆ ಈ ದಂಪತಿ. ಇವರಿಬ್ಬರ ಮಕ್ಕಳೂ ಕೂಡ ಜಿಂದಾಲ್‌ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. 

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ; ಆನ್‌ಲೈನ್‌ ಕ್ಲಾಸ್ ಆರಂಭಿಸಿ ಶಾಲೆಗಳ ಉದ್ಧಟತನ

ವಾರಕ್ಕೆ ಒಂದು ಸಲ ಇವರಿಬ್ಬರೂ ತಮ್ಮ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಮಕ್ಕಳಿಗೆ ಕೊರೋನಾ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದಿದೆ. ಆದರೆ, ಇವರ ತಂದೆ ತಾಯಿಗೆ ಪಾಸಿಟಿವ್‌ ಇದೆ ಎಂಬ ಮಾಹಿತಿ ಬರುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.