ಬೆಣ್ಣೆ ನಗರಿ ದಾವಣೆಗೆರೆಯಲ್ಲಿ 61ಕ್ಕೇರಿದ ಕೊರೋನಾ ಸೋಂಕಿತರು..!

ರೋಗಿ ನಂ.533 ಈಗ ಸೂಪರ್‌ ಸ್ಪ್ರೆಡರ್ ಆಗಿ ಬದಲಾಗಿದ್ದಾನೆ. ಈತನಿಂದಾಗಿ ಬೆಣ್ಣೆ ನಗರಿ ಅಕ್ಷರಶಹ ಬೆಚ್ಚಿ ಬಿದ್ದಿದೆ. ಈತನಿಂದಾಗಿ ಐದು ಮಕ್ಕಳಿಗೂ ಕೊರೋನಾ ಸೋಂಕು ತಗುಲಿದೆ. ನಿನ್ನೆ ಒಂದೇ ದಿನ ದಾವಣಗೆರೆಯಲ್ಲಿ ದಾಖಲಾದ 14 ಪ್ರಕರಣಗಳ ಪೈಕಿ 10 ಪ್ರಕರಣಗಳು P-533 ವ್ಯಕ್ತಿಯಿಂದಲೇ ಹರಡಿದೆ.

First Published May 9, 2020, 12:58 PM IST | Last Updated May 9, 2020, 12:58 PM IST

ದಾವಣಗೆರೆ(ಮೇ.09): ಬೆಣ್ಣೆ ನಗರ ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 60ರ ಗಡಿ ದಾಟಿದೆ. ಶುಕ್ರವಾರ ಒಂದೇ ದಿನ 14 ಕೊರೋನಾ ಪ್ರಕರಣಗಳು ದೃಢಪಟ್ಟ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ರೋಗಿ ನಂ.533 ಈಗ ಸೂಪರ್‌ ಸ್ಪ್ರೆಡರ್ ಆಗಿ ಬದಲಾಗಿದ್ದಾನೆ. ಈತನಿಂದಾಗಿ ಬೆಣ್ಣೆ ನಗರಿ ಅಕ್ಷರಶಹ ಬೆಚ್ಚಿ ಬಿದ್ದಿದೆ. ಈತನಿಂದಾಗಿ ಐದು ಮಕ್ಕಳಿಗೂ ಕೊರೋನಾ ಸೋಂಕು ತಗುಲಿದೆ. ನಿನ್ನೆ ಒಂದೇ ದಿನ ದಾವಣಗೆರೆಯಲ್ಲಿ ದಾಖಲಾದ 14 ಪ್ರಕರಣಗಳ ಪೈಕಿ 10 ಪ್ರಕರಣಗಳು P-533 ವ್ಯಕ್ತಿಯಿಂದಲೇ ಹರಡಿದೆ.

12 ಕೊರೋನಾ ಕೇಸ್ ಪತ್ತೆ: ಭಟ್ಕಳದಲ್ಲಿ ಹೈ ಅಲರ್ಟ್..!

P-533 ವ್ಯಕ್ತಿಯ ಸಂಪರ್ಕದಲ್ಲಿರುವವರ ಮಾಹಿತಿ ಸಂಗ್ರಹ ಇದೀಗ ದಾವಣಗೆರೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ವೈದ್ಯರು, ಆಶಾ ಕಾರ್ಯಕರ್ತೆಯವರ ಮನೆ ಮನೆ ಸರ್ವೆ ಆರಂಭಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.