ಒಂದೇ ಕಟ್ಟಡದಲ್ಲಿ ವಾಸವಿದ್ದ 11 ಮಂದಿಗೆ ಕೊರೋನಾ ಶಾಕ್..!

ತಬ್ಲಿಘಿಗಳು ವಾಸಿಸುವ ಏರಿಯಾದಲ್ಲೇ ಈ ಮೂರು ಕುಟುಂಬಗಳು ವಾಸವಾಗಿದ್ದವು. ಅವರಿಂದಲೇ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮೂರು ಕುಟುಂಬಗಳು ಕಳೆದೊಂದು ತಿಂಗಳಿನಿಂದ ಏರಿಯಾ ಬಿಟ್ಟು ಹೊರಗೆ ಹೋಗಿಲ್ಲ.

First Published May 13, 2020, 5:39 PM IST | Last Updated May 13, 2020, 5:39 PM IST

ಬೀದರ್(ಮೇ.13): ನಗರದ ಓಲ್ಡ್ ಸಿಟಿಯಲ್ಲಿ ಒಂದೇ ಕಟ್ಟಡದಲ್ಲಿ ವಾಸವಿದ್ದ ಮೂರು ಕುಟುಂಬಗಳ 11 ಮಂದಿಗೆ ಕೊರೋನ ಬರ ಸಿಡಿಲು ಬಂದೆರಗಿದೆ. ತಾಯಿ-ಮಕ್ಕಳಿಗೆ ಸೇರಿದಂತೆ ಒಂದೇ ಕುಟುಂಬದ ನಾಲ್ವರಿಗೆ ಕೊರೋನಾ ಸೋಂಕು ತಗುಲಿದೆ.

ತಬ್ಲಿಘಿಗಳು ವಾಸಿಸುವ ಏರಿಯಾದಲ್ಲೇ ಈ ಮೂರು ಕುಟುಂಬಗಳು ವಾಸವಾಗಿದ್ದವು. ಅವರಿಂದಲೇ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮೂರು ಕುಟುಂಬಗಳು ಕಳೆದೊಂದು ತಿಂಗಳಿನಿಂದ ಏರಿಯಾ ಬಿಟ್ಟು ಹೊರಗೆ ಹೋಗಿಲ್ಲ.

ಮುಂಬೈನಿಂದ ಸೈಕಲ್‌ನಿಂದ ಬಂದವರು ಶಿವಮೊಗ್ಗದಲ್ಲಿ ಕ್ವಾರಂಟೈನ್..!

ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೊರೋನಾ ಸೋಂಕು ಮತ್ತೆ ಪತ್ತೆಯಾಗಿರುವುದು ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories