ಸಿಗರೇಟ್ ಕದ್ದ ಅಂತ ಬೇಕಬಿಟ್ಟಿ ಹೊಡೆದು ಕೊಂದರು! ಲಕ್ಷ ಮೌಲ್ಯದ ಸಿಗರೇಟ್ ಅಂತೆ, ಅದು ಸಿಗರೇಟೇನಾ?
ಕಲಬುರಗಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿ ಸೈಟ್ ಗಳ ರೇಟು ಗಗನಕ್ಕೇರಿವೆ. ಇದನ್ನೆ ಬಂಡವಾಳ ಮಾಡಿಕೊಂಡಿರೋ ಕೆಲವರು ಬೆಲೆ ಬಾಳುವ ಸೈಟ್ ಗಳ ನಕಲಿ ಕಾಗದ ಸೃಷ್ಟಿ ಮಾಡಿ ಮಾಲೀಕರಿಗೆ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡಿಕೊಳ್ಳೋ ದಂಧೆಗೆ ಇಳಿದಿದ್ದಾರೆ. ಇದಕ್ಕಾಗಿ ತಲೆಗಳನ್ನೇ ಉರುಳಿಸಲು ಸಿದ್ಧರಾಗ್ತಾರೆ ಈ ಕಿರಾತಕರು.
ಕಲಬುರಗಿ: ಆತ ಬಡ ಹುಡುಗ. ಬ್ಲಡ್ ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನು ಇದ್ದವನು. ಮನೆಗೆ ಇವನೇ ದಿಕ್ಕು ಸಹ. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದವನು ಎಷ್ಟೊತ್ತಾದ್ರೂ ವಾಪಸ್ ಆಗಿರಲಿಲ್ಲ. ಅಮ್ಮನಿಗೆ ಡೌಟ್ ಬಂದು ಅವನ ಕಚೇರಿಗೆ ಹೋದ್ರೆ ಅವನನ್ನ ಯಾರೋ ಮನಬಂದಂತೆ ಬಡಿಯುತ್ತಿದ್ರು. ಅಮ್ಮ ಹೋಗಿ ಕೇಳಿದ್ರೆ ಅವರು ಹೇಳಿದ್ದು ಸಿಗರೇಟಿನ ಕಥೆಯನ್ನ.
ನಂತರ ಸಮದಾನ ಮಾಡಿ ಮನೆಗೆ ಕರೆದುಕೊಂಢು ಹೋಗಬೇಕು ಅನ್ನುವಷ್ಟರಲ್ಲೆ ಅಮ್ಮನ ಎದುರೇ ಆ ಹುಡುಗ ಪ್ರಾಣಬಿಟ್ಟಿದ್ದ. ಅಷ್ಟಕ್ಕೂ ಆ ಬಡಹುಡುಗನನ್ನ ಹೊಡೆದಿದ್ಯಾರು? ಯಾಕಾಗಿ ಹೊಡೆದ್ರು? ಒಂದು ಡೆಡ್ಲಿ ಮರ್ಡರ್ ಹಿಂದಿನ ರಹಸ್ಯ ಇಲ್ಲಿದೆ ನೋಡಿ