ಉತ್ತರ ಕರ್ನಾಟಕದಲ್ಲಿ ಮಳೆಗಾಗಿ ಹಾಹಾಕಾರ, ಕಲಬುರಗಿಯಲ್ಲಿ ಮುಂಗಾರು ವಿಳಂಬ....
ಮುಂಗಾರು ಮಳೆ ವಿಳಂಬ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರಗಾಲದ ಆತಂಕ ಮೂಡಿದೆ.
ಮುಂಗಾರು ಮಳೆ ವಿಳಂಬ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರಗಾಲದ ಆತಂಕ ಮೂಡಿದೆ. ಕಲಬುರಗಿ ಜಿಲ್ಲೆಯಲ್ಲಿ ಇಷ್ಟೊತ್ತಿಗೆ ಮಳೆ ಸುರಿದು ಬಿತ್ತನೆ ಆರಂಭವಾಗಬೇಕಿತ್ತು. ಇದೀಗ ಜೂನ್ ತಿಂಗಳೂ ಮುಗಿಯುತ್ತಿದ್ದರು ನಿರೀಕ್ಷಿತ ಮಳೆಯಾಗಿಲ್ಲ . ಇನ್ನು ಜಮೀನು ಹದ ಮಾಡಿಕೊಂಡು ಬಿತ್ತನೆಗೆ ಸಿದ್ದಂತೆ ಮಾಡಿಕೊಂಡ ರೈತರಲ್ಲಿ ಆತಂಕ ಮೂಡಿದೆ. ಜೂನ್ 1 ರಿಂದ 16ರವರೆಗೆ 64.6 ಮಿ.ಮೀ ಮಳೆಯಾಗಬೇಕಿತ್ತು .ಆದರೆ 20.7 ಮಿ.ಮೀ ಮಾತ್ರ ಮಳೆ ಸುರಿದಿದೆ.ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದೆಎಂದು ಹವಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.