ಕಲಬುರಗಿಯಲ್ಲಿ ನಾಲ್ವರು ಬಾಲಕಿಯರಿಗೆ ಕೊರೋನಾ ಸೋಂಕು ಪತ್ತೆ..!

ಕಲಬುರಗಿಯ ಎಂಟು ಮಂದಿ ಸೋಂಕಿತರಲ್ಲಿ ನಾಲ್ವರು ಬಾಲಕಿಯರು ಎನ್ನುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. 4, 12, 14 ಮತ್ತು 17 ವರ್ಷದ ಬಾಲಕಿಯರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

Share this Video
  • FB
  • Linkdin
  • Whatsapp

ಕಲಬುರಗಿ(ಏ.29): ಕೊರೋನಾ ಸೋಂಕಿಗೆ ಕಲಬುರಗಿ ತತ್ತರಿಸಿ ಹೋಗಿದೆ. ಬುಧವಾರ ಬೆಳಗ್ಗೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಅನ್ವಯ ರಾಜ್ಯದಲ್ಲಿ 9 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಎಂಟು ಮಂದಿ ಕಲಬುರಗಿಯವರು ಎನ್ನುವ ಆಘಾತಕಾರಿ ವರದಿ ಹೊರಬಿದ್ದಿದೆ.

ಈ ಎಂಟು ಮಂದಿ ಸೋಂಕಿತರಲ್ಲಿ ನಾಲ್ವರು ಬಾಲಕಿಯರು ಎನ್ನುವ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. 4, 12, 14 ಮತ್ತು 17 ವರ್ಷದ ಬಾಲಕಿಯರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಕೊರೋನಾದಿಂದ ಬೆಂಗಳೂರು ಸೇಫ್: ಇಂದು ಪತ್ತೆಯಾಗಿಲ್ಲ ಒಂದೇ ಒಂದು ಕೇಸ್

ಮಂಗಳವಾರ ಕಲಬುರಗಿಯಲ್ಲಿ 6 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ 8 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿರುವುದು ಜನರಲ್ಲಿ ಕಳವಳವನ್ನುಂಟು ಮಾಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


Related Video