ಶಿವಪ್ಪ ಜಮಾದಾರ್: ಕಾಲಿಲ್ಲದಿದ್ದರೂ ಕೃಷಿಯಲ್ಲಿ ಕಮಾಲ್ ಮಾಡಿದ ಕೃಷಿಕ..!

40 ವರ್ಷದ ಶಿವಪ್ಪ ಜಮಾದಾರ್ ಅವರಿಗೆ ಬಾಲ್ಯದಿಂದಲೇ ಪೋಲಿಯೋದಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ಕಾಲಿಲ್ಲದಿದ್ದರೂ ಇವರು ಕೃಷಿ ಕಾಯಕದಲ್ಲಿ ಛಲದಂಕ ಮಲ್ಲ.

First Published Nov 22, 2022, 5:14 PM IST | Last Updated Nov 22, 2022, 5:14 PM IST

ಛಲವೊಂದಿದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿ ಈ ದಿವ್ಯಾಂಗ ರೈತ. ಕಾಲಿಲ್ಲದಿದ್ದರೂ ಕೃಷಿ ಮಾಡುತ್ತಿದ್ದಾರೆ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ರೈತ ಶಿವಪ್ಪ ಜಮಾದಾರ. 40 ವರ್ಷದ ಶಿವಪ್ಪ ಜಮಾದಾರ್ ಅವರಿಗೆ ಬಾಲ್ಯದಿಂದಲೇ ಪೋಲಿಯೋದಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ಕಾಲಿಲ್ಲದಿದ್ದರೂ ಇವರು ಕೃಷಿ ಕಾಯಕದಲ್ಲಿ ಛಲದಂಕ ಮಲ್ಲ. ತನ್ನ ಒಂದು ಎಕರೆ ತೋಟದಲ್ಲಿ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಕೈ ತುಂಬಾ ಸಂಪಾದಿಸಿ ಜೀವನ ನಿರ್ವಹಿಸುತ್ತಿದ್ದಾರೆ. ರೈತ ಶಿವಪ್ಪ ಜಮಾದಾರ್, ತನ್ನ ತೋಟದ ಎಲ್ಲಾ ಕೆಲಸಗಳನ್ನ ಸ್ವತಃ ತಾವೇ ನಿರ್ವಹಿಸುತ್ತಾರೆ. ಅಂದರೆ ತೋಟದಲ್ಲಿ ಬೆಳೆದ ತರಕಾರಿ ಬೆಳೆಗೆ ನೀರುಣಿಸುವುದು, ಬೆಳೆಯಲ್ಲಿನ ಕಳೆ ತೆಗೆಯುವುದು, ಬೆಳೆದ ತರಕಾರಿ ಕಟಾವು ಮಾಡುವುದು, ಅಷ್ಟೇ ಅಲ್ಲದೇ ಕಟಾವು ಮಾಡಿದ ತರಕಾರಿಯನ್ನು ತನ್ನ 3 ಚಕ್ರದ ಬೈಕ್‌ನಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಮಾರಾಟ ಮಾಡಿಕೊಂಡು ಬರುವವರೆಗೆ ಎಲ್ಲಾ ಕೆಲಸವನ್ನು ನಿರ್ವಹಿಸುತ್ತಾರೆ. 

Video Top Stories