ಬಯಲಾಯ್ತು ಸೀಕ್ರೇಟ್: KXIP ಮ್ಯಾಕ್ಸ್‌ವೆಲ್ ದುಬಾರಿ ಮೊತ್ತಕ್ಕೆ ಖರೀದಿಸಿದ್ದೇಕೆ..?

2019ರ ಡಿಸೆಂಬರ್‌ನಲ್ಲಿ ಕೋಲ್ಕತದಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಎರಡನೇ ದುಬಾರಿ ಮೊತ್ತಕ್ಕೆ ಮ್ಯಾಕ್ಸ್‌ವೆಲ್ ಅವರನ್ನು ಪ್ರೀತಿ ಝಿಂಟಾ ಸಹ ಒಡೆತನದ ಫ್ರಾಂಚೈಸಿ ಖರೀದಿಸಿತ್ತು.

First Published Sep 11, 2020, 6:15 PM IST | Last Updated Sep 11, 2020, 6:15 PM IST

ದುಬೈ(ಸೆ.11): ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರಿಗೆ ಐಪಿಎಲ್‌ ಹರಾಜಿನಲ್ಲಿ ಫ್ರಾಂಚೈಸಿಗಳು ಕೋಟಿ-ಕೋಟಿ ರುಪಾಯಿ ಹಣ ನೀಡಿ ಖರೀದಿಸುವುದು ಸರ್ವೇ ಸಾಮಾನ್ಯ. ಆದರೆ ಬ್ಯಾಡ್‌ ಫಾರ್ಮ್‌ನಲ್ಲಿದ್ದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡ 10.75 ಕೋಟಿ ರುಪಾಯಿ ನೀಡಿ ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಹೌದು, 2019ರ ಡಿಸೆಂಬರ್‌ನಲ್ಲಿ ಕೋಲ್ಕತದಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಎರಡನೇ ದುಬಾರಿ ಮೊತ್ತಕ್ಕೆ ಮ್ಯಾಕ್ಸ್‌ವೆಲ್ ಅವರನ್ನು ಪ್ರೀತಿ ಝಿಂಟಾ ಸಹ ಒಡೆತನದ ಫ್ರಾಂಚೈಸಿ ಖರೀದಿಸಿತ್ತು.

IPL 2020 ಈ ಸಲ RCB ಚಾಂಪಿಯನ್ ಆಗಲು ಸುವರ್ಣಾವಕಾಶ..!

ಯಾರಿಗೂ ಬೇಡವಾಗಿದ್ದ ಆಟಗಾರನನ್ನು ಅಷ್ಟೊಂದು ದುಬಾರಿ ಮೊತ್ತ ನೀಡಿ ಖರೀದಿಸಿದ್ದೇಕೆ ಎನ್ನುವ ಸೀಕ್ರೆಟ್‌ ಇದೀಗ ಬಯಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ