Asianet Suvarna News Asianet Suvarna News

ಧೋನಿಯಿಂದ ಸ್ಪೆಷಲ್ ಗಿಫ್ಟ್ ಪಡೆದ ಜೋಸ್ ಬಟ್ಲರ್..!

ಮೊನ್ನೆ ಈ ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ಮುಖಾಮುಖಿಯಾಗಿದ್ದರು. ಈ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ ಬಟ್ಲರ್‌ ಧೋನಿಯಿಂದ ಸ್ಪೆಷಲ್ ಗಿಫ್ಟ್ ಪಡೆದಿದ್ದಾರೆ. ಧೋನಿಯಿಂದ ಗಿಫ್ಟ್ ಪಡೆದ ಬಟ್ಲರ್ ಫುಲ್ ಖುಷ್ ಆದರು.

Oct 21, 2020, 8:03 PM IST

ದುಬೈ(ಅ.21): ವಿಶ್ವದ ಬೆಸ್ಟ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಯಾರು ಅಂದರೆ ನಮ್ಮ ಮನಸ್ಸಿಗೆ ಥಟ್ಟನೆ ನೆನಪಾಗೋದು ದಿ ಲೆಜೆಂಡ್, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ. ಇದೀಗ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮತ್ತೊಬ್ಬ ಬ್ಯಾಟ್ಸ್‌ಮನ್ ಎಂದರೆ ಅದು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್.

ಮೊನ್ನೆ ಈ ಇಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳು ಮುಖಾಮುಖಿಯಾಗಿದ್ದರು. ಈ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ ಬಟ್ಲರ್‌ ಧೋನಿಯಿಂದ ಸ್ಪೆಷಲ್ ಗಿಫ್ಟ್ ಪಡೆದಿದ್ದಾರೆ. ಧೋನಿಯಿಂದ ಗಿಫ್ಟ್ ಪಡೆದ ಬಟ್ಲರ್ ಫುಲ್ ಖುಷ್ ಆದರು.

IPL 2020: RCB ವಿರುದ್ಧ ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ

ಹೌದು, ರಾಜಸ್ಥಾನ ವಿರುದ್ಧದ ಪಂದ್ಯ ಧೋನಿ ಪಾಲಿಗೆ 200ನೇ ಐಪಿಎಲ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಧೋನಿ ಧರಸಿದ್ದ ಜೆರ್ಸಿಯನ್ನು ಜೋಸ್ ಬಟ್ಲರ್ ಗಿಫ್ಟ್ ಆಗಿ ಪಡೆದುಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.