Asianet Suvarna News Asianet Suvarna News

ಮುಂಬೈ ಸಂಹಾರ: RCB ಗೆಲುವನ್ನು ಹಬ್ಬವಾಗಿ ಆಚರಿಸಿದ ಫ್ಯಾನ್ಸ್..!

ಆರ್‌ಸಿಬಿ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಎರಡನೇ ಗೆಲುವು ದಾಖಲಿಸುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸಿದ್ದಾರೆ. ಇದರ ಜತೆಗೆ ಟೀಕಾಕಾರರು ಬಾಯಿ ಮುಚ್ಚಿಕೊಂಡಿರುವಂತೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು(ಸೆ.30): ಕಳೆದ 12 ಆವೃತ್ತಿಗಳಲ್ಲಿ ಐಪಿಎಲ್ ಟ್ರೋಫಿ ಗೆಲ್ಲದಿದ್ದರೂ ಅಭಿಮಾನಿಗಳಲ್ಲಿ ಆರ್‌ಸಿಬಿ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವಾಗ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ರೋಚಕವಾಗಿ ಗೆದ್ದ ಮೇಲೆ ಆರ್‌ಸಿಬಿ ಅಭಿಮಾನಿಗಳು ಸುಮ್ಮನಿರಲು ಸಾಧ್ಯವೇ..?

ಹೌದು, ಆರ್‌ಸಿಬಿ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಎರಡನೇ ಗೆಲುವು ದಾಖಲಿಸುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸಿದ್ದಾರೆ. ಇದರ ಜತೆಗೆ ಟೀಕಾಕಾರರು ಬಾಯಿ ಮುಚ್ಚಿಕೊಂಡಿರುವಂತೆ ತಿರುಗೇಟು ನೀಡಿದ್ದಾರೆ.

ಸೂಪರ್ ಓವರ್‌ ಕೂಡಾ ಟೈ ಆದ್ರೆ ಏನಾಗುತ್ತೆ..? ರೂಲ್ಸ್ ಏನು ಹೇಳುತ್ತೆ..?

ಈಗ ಎಲ್ಲಿ ನೋಡಿದರೂ ಆರ್‌ಸಿಬಿಯದ್ದೇ ಹವಾ. ಸಾಮಾಜಿಕ ಜಾಲತಾಣಗಳಲ್ಲಂತೂ ವಿರೋಧಿಗಳು ಸೈಲೆಂಟ್‌ ಆಗಿ ಸೈಡಿಗೆ ಹೋಗುವಂತೆ ಮಾಡಿದ್ದಾರೆ ಆರ್‌ಸಿಬಿ ಫ್ತಾನ್ಸ್. ಇನ್ನು ಗೆಲವರು ಟಿವಿಗೆ ಆರತಿ ಬೆಳಗಿ ಗೆಲುವನ್ನು ಸ್ವಾಗತಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories