ಕನ್ನಡಿಗರಿಗೆ ಅವಕಾಶ ನೀಡಲು KXIP ತಂಡದ ಹಿತ ಮರೆತ್ರಾ ಕುಂಬ್ಳೆ..?
ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದರು ಪಂಜಾಬ್ ಆಡಿರುವ 4 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಗೆಲುವಿನ ಸಿಹಿ ಕಂಡಿದ್ದು 3ರಲ್ಲಿ ಮುಗ್ಗರಿಸಿದೆ. ಇದರ ಬೆನ್ನಲ್ಲೇ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮೇಲೆ ತಾಯ್ನಾಡಿನ ಸ್ವಪ್ರೇಮಕ್ಕಾಗಿ ಪಂಜಾಬ್ ತಂಡದ ಹಿತ ಮರೆತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಂಗಳೂರು(ಅ.04): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕಿಂಗ್ಸ್ ಇಲೆವನ್ ಕರ್ನಾಟಕ ಎನ್ನುವಷ್ಟರ ಮಟ್ಟಿಗೆ ಬದಲಾಗಿ ಹೋಗಿದೆ. ತಂಡದ ಕೋಚ್ ಅನಿಲ್ ಕುಂಬ್ಳೆ, ನಾಯಕ ಕೆ.ಎಲ್. ರಾಹುಲ್ ಸೇರಿದಂತೆ 6 ಮಂದಿ ಕನ್ನಡಿಗರು ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದಾರೆ.
ಹೌದು, ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದರು ಪಂಜಾಬ್ ಆಡಿರುವ 4 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಗೆಲುವಿನ ಸಿಹಿ ಕಂಡಿದ್ದು 3ರಲ್ಲಿ ಮುಗ್ಗರಿಸಿದೆ. ಇದರ ಬೆನ್ನಲ್ಲೇ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮೇಲೆ ತಾಯ್ನಾಡಿನ ಸ್ವಪ್ರೇಮಕ್ಕಾಗಿ ಪಂಜಾಬ್ ತಂಡದ ಹಿತ ಮರೆತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಐಪಿಎಲ್ 2020: ಪಂಜಾಬ್‌ಗಿಂದು ಧೋನಿ ಪಡೆ ಚಾಲೆಂಜ್..!
ಕರ್ನಾಟಕದ ಆಟಗಾರ ಕರುಣ್ ನಾಯರ್ ಪದೇ ಪದೇ ವಿಫಲವಾಗುತ್ತಿದ್ದರೂ ಅವರಿಗೆ ಕುಂಬ್ಳೆ ಅವಕಾಶ ನೀಡುತ್ತಿದ್ದಾರೆ. ಮನ್ದೀಪ್ ಅವರನ್ನು ಸುಮ್ಮನೆ ಬೆಂಚ್ ಕಾಯಿಸಲಾಗುತ್ತಿದೆ ಎನ್ನುವ ಟೀಕೆ ವ್ಯಕ್ತವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.