ಬಿಜೆಪಿ ಲೀಡರ್ ಮನೆಗೂ ನುಗ್ಗಿತು ಯೋಗಿ ಬುಲ್ಡೋಜರ್..!

ಮಹಿಳೆಯೊಬ್ಬಳನ್ನು ಹಲ್ಲೆ ಮಾಡಿ ನಿಂದನೆ ನಡೆಸಿದ ಆರೋಪದ ಮೇಲೆ ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮನೆ ಮೇಲೆ ಬುಲ್ಡೋಜರ್ ದಾಳಿ ನಡೆಸಲಾಗಿದೆ.

First Published Aug 9, 2022, 10:01 PM IST | Last Updated Aug 9, 2022, 10:01 PM IST

ಲಕ್ನೋ: ಉತ್ತರಪ್ರದೇಶದಲ್ಲಿ ಯಾರಾದರೂ ಬಾಲ ಬಿಚ್ಚಿದ್ರೆ, ಕಲ್ಲು ತೂರಾಟ, ಗೂಂಡಾಗರಿ ನಡೆಸಿದರೆ ಯೋಗಿ ಸರ್ಕಾರ ಅವರ ಮನೆ ಮೇಲೆ ಬುಲ್ಡೋಜರ್‌ ಹತ್ತಿಸುತ್ತೆ. ಅದು ಎಂತಹ ನಾಯಕನೇ ಆಗಿರಬಹುದು ಹಿಂದೂ ಮುಂದೆ ನೋಡದೇ ಅಕ್ರಮವೆಸಗುವವರ ವಿರುದ್ಧ ಕ್ರಮ ಕೈಗೊಳ್ಳುವ ಯೋಗಿ ಸರ್ಕಾರ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಯೋಗಿ ಸರ್ಕಾರದ ಹೊಸ ಕಾನೂನು ಆ ರೀತಿ ಇದೆ. ಹಾಗೆಯೇ ಈಗ ನೋಯ್ಡಾ ಸೆಕ್ಟರ್ 93 ಬಿಯಲ್ಲಿ ಗ್ರಾಂಡ್‌ ಒಮೆಕ್ಸ್‌ ಸೊಸೈಟಿಯ ನಿವಾಸಿಯ ಮಹಿಳೆಯೊಬ್ಬಳನ್ನು ಹಲ್ಲೆ ಮಾಡಿ ನಿಂದನೆ ನಡೆಸಿದ ಆರೋಪದ ಮೇಲೆ ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಮನೆ ಮೇಲೆ ಬುಲ್ಡೋಜರ್ ದಾಳಿ ನಡೆಸಲಾಗಿದೆ. ಮರಗಳನ್ನು ನೆಡುವ ಬಗ್ಗೆ ಮಹಿಳೆ ಹಾಗೂ ಶ್ರೀಕಾಂತ್ ತ್ಯಾಗಿ ಮಧ್ಯೆ ವಾಗ್ವಾದ ಉಂಟಾಗಿ ಶ್ರೀಕಾಂತ್ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಶ್ರೀಕಾಂತ್ ವಿರುದ್ಧ ಐಪಿಸಿ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈಗ ಬುಲ್ಡೋಜರ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಮ್ಮ ರಾಜ್ಯದಲ್ಲೂ ಅಂತ ಕಾನೂ ಬರಲಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.