Asianet Suvarna News Asianet Suvarna News

ಮದರಸಾಗಳ ಆಧುನಿಕರಣಕ್ಕೆ ಯೋಗಿ ನಿರ್ಧಾರ, ಕರ್ನಾಟಕದಲ್ಲೂ ಆಗುತ್ತಾ ಬದಲಾವಣೆ.?

- ಮದರಸಗಳಲ್ಲಿ ಧರ್ಮದ ಜೊತೆಗೆ ಆಧುನಿಕ ಶಿಕ್ಷಣಕ್ಕೂ ಆದ್ಯತೆ

- ಮದರಸಾಗಳ ನಿಯಂತ್ರಣಕ್ಕೆ  ಯುಪಿ ಸರ್ಕಾರದ ದಿಟ್ಟ ಹೆಜ್ಜೆ

- ಮಕ್ಕಳಿಗೆ.. ಶಿಕ್ಷಕರಿಗೆ.. ಯೋಗಿ ಸರ್ಕಾರದ ಮಾನದಂಡ ಫಿಕ್ಸ್

- ಮದರಸಾಗಳ ಆಧುನಿಕರಣಕ್ಕೆ ಯೋಗಿ ನಿರ್ಧಾರ!

First Published Jul 20, 2022, 5:01 PM IST | Last Updated Jul 20, 2022, 5:42 PM IST

ಮದರಸಗಳಲ್ಲಿ (Madarsa) ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣವೂ ಇರಲಿ ಎಂದು ಮದರಸಾಗಳ ನಿಯಂತ್ರಣಕ್ಕೆ  ಯುಪಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಮಕ್ಕಳಿಗೆ,  ಶಿಕ್ಷಕರಿಗೆ,  ಮಾನದಂಡ ಫಿಕ್ಸ್ ಮಾಡಿದೆ. ಮದರಸಾ ಶಿಕ್ಷಕರಿಗೆ TET ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅರೇಬಿಕ್ ಜೊತೆ ಹಿಂದಿ, ಇಂಗ್ಲೀಷ್, ಗಣಿತ ಕಲಿಕೆ ಕಡ್ಡಾಯಗೊಳಿಸಲಾಗಿದೆ. ಇದನ್ನ ಸಾಕಷ್ಟು ಮಂದಿ ಸ್ವಾಗತಿಸಿದ್ರೆ, ಇನ್ನೂ ಕೆಲವರು ಇದರ ಹಿಂದೆ ಇರೋದೆಲ್ಲಾ ಬರೀ ರಾಜಕೀಯ ಮಾತ್ರ ಅಂತಿದ್ದಾರೆ..ಹಾಗಾದ್ರೆ, ಈ ಎರಡೂ ಮಾತಿನ  ಹಿಂದಿರೋ ಅಸಲಿ ಸತ್ಯ ಏನು..? ಉತ್ತರ ಪ್ರದೇಶದಲ್ಲಿ ಉಂಟಾಗಿರೋ ಈ ಬೃಹತ್ ಬದಲಾವಣೆ, ಕರ್ನಾಟಕದಲ್ಲೂ ಆಗುತ್ತಾ..? 

ಮದರಸ ಶಿಕ್ಷಣ ವ್ಯವಸ್ಥೆ ಮೇಲೆ ಕಣ್ಣು, ಶಿಕ್ಷಕರಿಗೆ TET ಕಡ್ಡಾಯ, ರಾಜ್ಯದಲ್ಲೂ ಆಗುತ್ತಾ ಬದಲಾವಣೆ..?