ಸರಗಳ್ಳರ ವಿರುದ್ಧ ಹೋರಾಡಿ ಕಳ್ಳನನ್ನು ಬೈಕ್‌ನಿಂದ ಬೀಳಿಸಿದ ಗಟ್ಟಿಗಿತ್ತಿ ಮಹಿಳೆ: ವೀಡಿಯೋ

ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳ್ಳರು ತಮ್ಮ ಕೈ ಚಳಕ ತೋರುತ್ತಿದ್ದು, ಇಲ್ಲೊಂದು ಕಡೆ ಇಂತಹ ಸರಗಳ್ಳರ ವಿರುದ್ಧ ಮಹಿಳೆಯೊಬ್ಬರು ಹೋರಾಡಿ ಕಳ್ಳರಿಂದ ತಮ್ಮ ಸರವನ್ನು ವಾಪಸ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

First Published Aug 27, 2023, 2:04 PM IST | Last Updated Aug 27, 2023, 2:04 PM IST

ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಸರಗಳ್ಳರು ತಮ್ಮ ಕೈ ಚಳಕ ತೋರುತ್ತಿದ್ದು, ಇಲ್ಲೊಂದು ಕಡೆ ಇಂತಹ ಸರಗಳ್ಳರ ವಿರುದ್ಧ ಮಹಿಳೆಯೊಬ್ಬರು ಹೋರಾಡಿ ಕಳ್ಳರಿಂದ ತಮ್ಮ ಸರವನ್ನು ವಾಪಸ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯೊಬ್ಬರು ತಮ್ಮ ಸ್ಕೂಟಿಯಲ್ಲಿ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬಂದು ಇನ್ನೇನು ಮನೆಯ ಪಾರ್ಕಿಂಗ್ ಸ್ಥಳಕ್ಕೆ ಸ್ಕೂಟಿ ತೆಗೆದುಕೊಂಡು ಹೋಗಬೇಕೆಂದು ವಾಹನ ಸ್ಲೋ ಮಾಡುತ್ತಿದ್ದಾಗಲೇ ಕಳ್ಳರು ಕೈಚಳಕ ತೋರಿ ಮಹಿಳೆಯ ಚಿನ್ನದ ಸರ ಎಗರಿಸಲು ನೋಡಿದ್ದಾರೆ. ಆದರೆ ಗಟ್ಟಿಗಿತ್ತಿ ಮಹಿಳೆ ಸರಕಳ್ಳನನ್ನು ಗಟ್ಟಿಯಾಗಿ ಹಿಡಿದು ಎಳೆದಿದ್ದು ಆತನನ್ನು ಬೈಕ್‌ನಿಂದ ಬೀಳಿಸಿದ್ದಾಳೆ ಅಲ್ಲದೇ ಆತನ ಬಳಿ ಇದ್ದ ಚಿನ್ನದ ಸರವನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

Video Top Stories