ಇಂಡಿಯಾ ಮೈತ್ರಿ ಮುರಿದು ಏಕಾಂಗಿ ಸ್ಪರ್ಧೆ ಘೋಷಿಸಿದ ಬೆನ್ನಲ್ಲೇ ಮಮತಾ ಕಾರು ಅಪಘಾತ!
ಲೋಕಸಭಾ ಚುನಾವಣೆಗೆ ಮಾಡಿಕೊಂಡ ಇಂಡಿಯಾ ಮೈತ್ರಿ ಮುರಿದುಕೊಂಡಿರುವ ಟಿಎಂಸಿ ಮುಖ್ಯಸ್ಥ ಮಮತಾ ಬ್ಯಾನರ್ಜಿ ಏಕಾಂಗಿ ಹೋರಾಟದ ಘೋಷಣೆ ಮಾಡಿದ್ದಾರೆ. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕಾರು ಅಪಘಾತಕ್ಕೀಡಾಗಿದೆ.
ಕೋಲ್ಕತಾ(ಜ.24) ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿರುವ ಬೆನ್ನಲ್ಲೇ ಹಲವು ರಾಜಕೀಯ ತಿರುವುಗಳು ನಡೆದಿದೆ. ಇಂದು ಬೆಳಗ್ಗೆ ಇಂಡಿಯಾ ಒಕ್ಕೂಟ ಮೈತ್ರಿ ಮುರಿದುಕೊಂಡು ಏಕಾಂಗಿ ಹೋರಾಟದ ಘೋಷಣೆಯನ್ನು ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಈ ಘೋಷಣೆ ಬಳಿ ಕೋಲ್ಕತಾದಿಂದ ತೆರಳುತ್ತಿದ್ದ ಮಮತಾ ಬ್ಯಾನರ್ಜಿ ಕಾರು ಅಫಘಾತಕ್ಕೀಡಾಗಿದೆ. ಮಮತಾ ತಲೆಗೆ ಸಣ್ಣ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಅದೃಷ್ಠವಶಾತ ಅಪಘಾತದ ಪ್ರಮಾಣ ಸಣ್ಣಮಟ್ಟದಲ್ಲಿ ನಡೆದಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಅಪಾಯದಿಂದ ಪಾರಾಗಿದ್ದಾರೆ. ತಲೆಗೆ ಸಣ್ಣ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಕೋಲ್ಕತಾಗೆ ಪ್ರಯಾಣ ಮಾಡುತ್ತಿದ್ದ ವೇಳೆ ಬದಿಯಿಂದ ದಿಡೀರ್ ಆಗಿ ವಾಹನ ಎದುರಿಗೆ ಬಂದಿದೆ. ಭೀಕರ ಅಪಘಾತ ತಪ್ಪಿಸಲು ಮಮತಾ ಬ್ಯಾನರ್ಜಿ ಕಾರು ಚಾಲಕ ದಿಡೀರ್ ಬ್ರೇಕ್ ಹಾಕಿದ್ದಾರೆ. ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಮಮತಾಬ್ಯಾನರ್ಜಿ ತಲೆ ಕಾರಿನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಮಮತಾ ಬ್ಯಾನರ್ಜಿ ತಲೆಗೆ ಸಣ್ಣ ಗಾಯವಾಗಿದೆ.
ಲೋಕಸಮರಕ್ಕೂ ಮುನ್ನ ಮೈತ್ರಿ ಠುಸ್, ಬಂಗಾಳದಲ್ಲಿ ಏಕಾಂಗಿ ಹೋರಾಟ ಘೋಷಿಸಿದ ಮಮತಾ!
ಕೋಲ್ಕತಾ ಆಸ್ಪತ್ರೆಯಲ್ಲಿ ಮಮತಾ ಬ್ಯಾನರ್ಜಿಯನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ. ಸಣ್ಣ ಗಾಯವಾಗಿರುವ ಕಾರಣ ಆತಂಕ ಪಡುವು ಅಗತ್ಯವಿಲ್ಲ ಎಂದಿದ್ದಾರೆ. ಕೋಲ್ಕತಾದಿಂದ ಪುರ್ಬಾ ಬರ್ಧಮಾನ್ ಕಡೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪುರ್ಬಾ ಬರ್ದಮಾನ್‌ನಲ್ಲಿ ಆಡಳಿತಾತ್ಮಕ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ತೆರಳಿದ್ದರು.
ಇಂದು ಬೆಳಗ್ಗೆ ಮಮತಾ ಬ್ಯಾನರ್ಜಿ ತಾವು ಇಂಡಿಯಾ ಒಕ್ಕೂಟ ಮೈತ್ರಿ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತಮ್ಮ ತೃಣಮೂಲ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದಿದೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಹಾಗೂ ಇತರ ರಾಜ್ಯಗಳಲ್ಲಿ ಟಿಎಂಸಿ ಏಕಾಂಗಿ ಹೋರಾಟ ನಡೆಸಲಿದೆ ಎಂದಿದೆ.
ಇಂಡಿಯಾ ಮೈತ್ರಿ ಚೂರು ಚೂರು, ಪಂಜಾಬ್‌ನಲ್ಲಿ ಮೈತ್ರಿ ಇಲ್ಲ ಏಕಾಂಗಿ ಹೋರಾಟ ಘೋಷಿಸಿದ ಆಪ್!
ಮಮತಾ ಬ್ಯಾನರ್ಜಿ ಬೆನ್ನಲ್ಲೇ ಇತ್ತ ಆಮ್ ಆದ್ಮಿ ಪಾರ್ಟಿ ಕೂಡ ಮೈತ್ರಿ ಮುರಿದು ಕೊಂಡಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಇಲ್ಲ ಎಂದಿದೆ. ಆಮ್ ಆದ್ಮಿ ಪಾರ್ಟಿ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ.