
ಭಾರತ-ಪಾಕ್ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?
ಭಾರತ ಮತ್ತು ಪಾಕಿಸ್ತಾನದ ನಡುವೆ ಅರಬ್ಬಿ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಯುದ್ಧದ ಸಂದರ್ಭದಲ್ಲಿ ಎರಡೂ ದೇಶಗಳ ನೌಕಾಪಡೆಗಳ ಬಲಾಬಲ ಹೇಗಿದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗೆ ಭಾರತದ ಪ್ರತಿಕ್ರಿಯೆ ಏನು?
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಒಂದು ವೇಳೆ ಇಲ್ಲಿಂದಲೇ ಯುದ್ಧ ಶುರುವಾದ್ರೆ, ಎರಡು ದೇಶಗಳ ನೌಕಾಪಡೆಯ ಬಲ ಮುಖ್ಯವಾಗುತ್ತೆ.ಭಾರತ ಹಾಗೂ ಪಾಕಿಸ್ತಾನದಲ್ಲಿ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಸಮರಭ್ಯಾಸ ಮಾಡ್ತೀನಿ ಅಂತ ಬಂದಿದ್ದ ಪಾಕಿಸ್ತಾನಕ್ಕೆ ಕ್ಷಿಪಣಿ ಪರೀಕ್ಷೆ ಮೂಲಕ ಉತ್ತರಿಸಿದೆ ಭಾರತ. ಹಾಗಿದ್ರೆ ಭಾರತ ಹಾಗೂ ಪಾಕಿಸ್ತಾನಗಳ ನೌಕಾ ಪಡೆಯ ಬಲಾಬಲ ಹೇಗಿದೆ. ಉಗ್ರರನ್ನು ಛೂ ಬಿಟ್ಟು ಭಾರತವನ್ನು ಕೆಣಕಿ ಪಾಕಿಸ್ತಾನಕ್ಕೆ ಆಗೋ ಲಾಭವಾದ್ರೂ ಏನು? ದೇಶಕ್ಕೇನು ಲಾಭವಿಲ್ಲ. ಆದ್ರೆ ದೇಶಕ್ಕೇನಾದ್ರೂ ಆಗಲಿ, ಅಧಿಕಾರ ಮುಖ್ಯ ಅನ್ನೋ ಮನೋಭಾವದ ಕೆಲವರು ಇದ್ರಿಂದ ಲಾಭ ಮಾಡಿಕೊಳ್ಳೋಕೆ ಹೊರಟಿದ್ದಾರೆ ಅನ್ನೋ ವಿಶ್ಲೇಷಣೆಗಳನ್ನು ಮಾಡಲಾಗ್ತಿದೆ.
ಭಾರತದ ಬಳಿ ಒಟ್ಟು 2,229 ಸೇನಾ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 1399 ಸೇನಾ ವಿಮಾನಗಳಿವೆ. ಇನ್ನು ಭಾರತದ ಬಳಿ 513 ಯುದ್ಧ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 328 ಯುದ್ಧ ವಿಮಾನಗಳಿವೆ. ಹಾಗೇನೆ ಭಾರತದ ಹತ್ತಿರ 130 ಅಟ್ಯಾಕ್ ಏರ್ಕ್ರಾಪ್ಟ್ಗಳಿದ್ರೆ ಪಾಕಿಸ್ತಾನದ ಬಳಿ ಕೇವಲ 90 ಅಟ್ಯಾಕ್ ಏರ್ಕ್ರಾಫ್ಟ್ಗಳು ಮಾತ್ರವೇ ಇರೋದು.