Asianet Suvarna News Asianet Suvarna News

ಪಾಕ್‌ನಲ್ಲಿ ಸೆರೆಯಾದ ಕಮಾಂಡರ್ ಅಭಿನಂದನ್ ಬಿಡುಗಡೆ ಹೇಗಾಯ್ತು? ಸ್ಫೋಟಕ ಮಾಹಿತಿ ಬಹಿರಂಗ!

2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಏರ್‌ಸ್ಟ್ರೈಕ್ ವೇಳೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಲ್ಲಿ ಸೆರೆಯಾಗಿದ್ದರು. ಆದರೆ ಅಷ್ಟೇ ವೇಗದಲ್ಲಿ ಭಾರತ ಅಭಿನಂದನ್‌ನನ್ನು ಸುರಕ್ಷಿತವಾಗಿ ಪಾಕಿಸ್ತಾನದಿಂದ ಬಿಡಿಸಿಕೊಂಡಿತ್ತು. ಅಭಿನಂದನ್ ಬಿಡುಗಡೆಯ ಸ್ಫೋಟಕ ಕಾರಣ ಬಹಿರಂಗವಾಗಿದೆ.
 

ನವದೆಹಲಿ(ಜ.10) ಪಾಕಿಸ್ತಾನ ಪ್ರಾಯೋಜಿತ ಉಗ್ರ ದಾಳಿಗೆ ಮುಕ್ತಿ ಹಾಡಲು ಭಾರತ 2019ರಲ್ಲಿ ಪಾಕಿಸ್ತಾನ ಸೀಮಾ ರೇಖೆ ಒಳಗೆ ನುಗ್ಗಿ ಏರ್‌ಸ್ಟ್ರೈಕ್ ಮಾಡಿತ್ತು. ಬಾಲಾಕೋಟ್ ಏರ್‌ಸ್ಟ್ರೈಕ್ ವೇಳೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನ ಸೇನೆ ಕೈಗೆ ಸೆರೆಯಾಗಿದ್ದರು. ಅಭಿನಂದನ್ ಬಂಧನವನ್ನು ಸಂಭ್ರಮಿಸುವ ಮೊದಲೇ ಭಾರತ ಯಶಸ್ವಿಯಾಗಿ ಅಭಿನಂದನ್ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದು ಹೇಗೆ ಸಾಧ್ಯವಾಯಿತು? ಈ ಕುರತು ಪಾಕಿಸ್ತಾನದಲ್ಲಿ ನಿಯೋಜನೆಗೊಂಡಿದ್ದ ಭಾರತದ ಮಾಜಿ ರಾಯಭಾರಿ ಅಜಯ್ ಬಿಸಾರಿಯಾ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ‘ಆ್ಯಂಗರ್‌ ಮ್ಯಾನೇಜ್‌ಮೆಂಟ್‌: ದ ಟ್ರಬಲ್ಡ್‌ ಡಿಪ್ಲೋಮ್ಯಾಟಿಕ್‌ ರಿಲೇಶನ್‌ಶಿಪ್‌ ಬಿಟ್‌ವೀನ್ ಇಂಡಿಯಾ ಅಂಡ್‌ ಪಾಕಿಸ್ತಾನ್‌’ ಎಂಬ ಪುಸ್ತಕದಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ಕುರಿತ ಸ್ಫೋಟಕ ಮಾಹಿತಿ ಇಲ್ಲಿದೆ.