Asianet Suvarna News Asianet Suvarna News

ಬಂಗಾಳದಲ್ಲಿ ಸೋತು ಗೆದ್ದ ಬಿಜೆಪಿ; 2 ರಿಂದ 75 ಸ್ಥಾನಕ್ಕೇರುವ ಹಿಂದಿದೆ ಮೋದಿ- ಶಾ ರಣತಂತ್ರ

ಪಶ್ಚಿಮ ಬಂಗಾಳದಲ್ಲಿ ಖುದ್ದು ನಂದಿಗ್ರಾಮದಲ್ಲಿ ಚುನಾವಣೆ ಸೋತರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಹಿಂದಿಗಿಂತ ತನ್ನ ಸ್ಥಾನ ಗಳಿಕೆ ಹೆಚ್ಚಿಸಿಕೊಂಡು ದ್ವಿಶತಕದ ಮೂಲಕ ದಿಗ್ವಿಜಯ ಸಾಧಿಸಿದೆ. 

ಬೆಂಗಳೂರು (ಮೇ. 03): ಪಶ್ಚಿಮ ಬಂಗಾಳದಲ್ಲಿ ಖುದ್ದು ನಂದಿಗ್ರಾಮದಲ್ಲಿ ಚುನಾವಣೆ ಸೋತರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಹಿಂದಿಗಿಂತ ತನ್ನ ಸ್ಥಾನ ಗಳಿಕೆ ಹೆಚ್ಚಿಸಿಕೊಂಡು ದ್ವಿಶತಕದ ಮೂಲಕ ದಿಗ್ವಿಜಯ ಸಾಧಿಸಿದೆ.

ವೆಂಟಿಲೇಟರ್‌ನಲ್ಲಿದ್ದ ಸೋಂಕಿತೆಗೆ ಒತ್ತಾಯಪೂರ್ವಕವಾಗಿ ಗೋಮೂತ್ರ ಕುಡಿಸಿದ ರಾಜಕಾರಣಿ!

ಇನ್ನೊಂದು ಕಡೆ ಈ ಬಾರಿ ಶತಾಯ ಗತಾಯ ಅಧಿಕಾರಕ್ಕೆ ಬರಲು ಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 100ರ ಗಡಿ ತಲುಪಲು ವಿಫಲವಾದರೂ ಕಳೆದ ಸಲದ ಸ್ಥಾನ ಗಳಿಕೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಬಾರಿ 2 ರಲ್ಲಿದ್ದ ಬಿಜೆಪಿ ಈ ಬಾರಿ 75 ಸ್ಥಾನಕ್ಕೇರಿದೆ. ಈ ಬೆಳವಣಿಗೆ ಬಿಜೆಪಿಗೆ ಆಶಾದಾಯಕವಾಗಿದೆ. ಹಾಗಾದರೆ ಇಲ್ಲಿ ಮೋದಿ - ಶಾ ತಂತ್ರ ವರ್ಕೌಟ್ ಆಯ್ತಾ..?