ದೇವರ ನಾಡಲ್ಲಿ ರಕ್ಕಸನಾಗಿ ಮೆರೆದ ಪ್ರವಾಹಕ್ಕೆ ಕಾರಣ ರಿವೀಲ್! ಕೇರಳಕ್ಕೆ ಅರಿವಾಗುವುದೇ ತನ್ನ ತಪ್ಪು ನಿರ್ಧಾರ!

ದೇವರ ನಾಡು ಅಂತ ಕರೆಸಿಕೊಳ್ತಾ ಇದ್ದ ಕೇರಳ, ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದೆ.. ಎಷ್ಟರ ಮಟ್ಟಿಗೆ ಅಂದ್ರೆ, ಆ ಪ್ರವಾಹ ಜಲದಲ್ಲಿ  ಹೆಣಗಳ ರಾಶಿ ತೇಲಿ ಬರ್ತಾ ಇದೆ.

First Published Aug 1, 2024, 6:28 PM IST | Last Updated Aug 1, 2024, 6:28 PM IST

ದೇವರ ನಾಡು ಅಂತ ಕರೆಸಿಕೊಳ್ತಾ ಇದ್ದ ಕೇರಳ, ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದೆ.. ಎಷ್ಟರ ಮಟ್ಟಿಗೆ ಅಂದ್ರೆ, ಆ ಪ್ರವಾಹ ಜಲದಲ್ಲಿ  ಹೆಣಗಳ ರಾಶಿ ತೇಲಿ ಬರ್ತಾ ಇದೆ.. ಊರಿಗೆ ಊರೇ ಸಮಾಧಿಯಾಗಿದೆ.. 13 ವರ್ಷಗಳ ಹಿಂದೆ ಕೊಟ್ಟಿದ್ದ ಆ 2 ವೈಜ್ಞಾನಿಕ ವರದಿಗಳನ್ನ ಕೇರಳ ಸರ್ಕಾರ ಧಿಕ್ಕರಿಸಿದ್ದೇ ಅನಾಹುತಕ್ಕೆ ಆಹ್ವಾನ ನೀಡಿತ್ತು ಅನ್ನೋ ಮಾತು ಕೇಳಿಬರ್ತಾ ಇದೆ.. ಅಪಾಯದಲ್ಲಿರೋ ದೇವರನಾಡನ್ನ ದೇವರೇ ಕೈಬಿಟ್ಟರೆ ಕಾಪಾಡೋದ್ಯಾರು ಅನ್ನೋ ಪ್ರಶ್ನೆ ಮೂಡಿದೆ.. ಇಷ್ಟೇ ಅಲ್ಲ, ಕೇಂದ್ರ ಸರ್ಕಾರ ವಾರ್ನಿಂಗ್ ಮೇಲೆ ವಾರ್ನಿಂಗ್ ಕೊಟ್ಟರೂ ಅದನ್ನ ಕ್ಯಾರೇ ಅನ್ನದೆ ನಿರ್ಲಕ್ಷಿಸಿತ್ತಂತೇ ಕೇರಳ ಸರ್ಕಾರ.. ಅದರಿಂದಲೇ ಸಂಭವಿಸಿದೆಯಂತೆ ಅನಾಹುತ.. ಇದೇ ಅಂತಿಮ ಎಚ್ಚರಿಕೆ.. ಯಾಮಾರಿದರೆ ಕರುನಾಡಿಗೂ ಕೇಡು ತಪ್ಪಿದ್ದಲ್ಲ ಅಂತಿರೋದ್ಯಾರು? ಈ ಭಯಾನಕ ದುರಂತಕ್ಕೆ ಕಾರಣವಾಗಿರೋ ವಿಲನ್ ಯಾರು..? ಕೇರಳದ ಕರಾಳ ರಾತ್ರಿಗೆ ಕಾರಣವೇನು? ಅದೆಲ್ಲೆದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

ಕೇರಳದಲ್ಲಾಗಿರೋ ದುರಂತಕ್ಕೆ, ಪ್ರಕೃತಿಯ ಅಟ್ಟಹಾಸ ಎಷ್ಟು ಕಾರಣವೋ, ಮನುಷ್ಯನ ಲಾಲಸೆ, ದುರಾಸೆಯೂ  ಅಷ್ಟೇ ಕಾರಣ ಅನ್ನಿಸಿಕೊಳ್ಳುತ್ತೆ.. ಅಷ್ಟೇ ಅಲ್ಲ, ಕೇರಳದ ದುರಂತಕ್ಕೆ ಯಾವ ಸಂಗತಿ ಕಾರಣ ಅಂತ ತಿಳಿದುಕೊಳ್ಳೋದು ಅತಿ ಮುಖ್ಯವಾಗುತ್ತೆ.. ಅದರಲ್ಲೂ ಕರ್ನಾಟಕ, ಈ ಘಟನೆಯಿಂದ ಪಾಠ ಕಲಿಯಲೇಬೇಕಿದೆ. ಕೇರಳದಲ್ಲಿ, ಇವತ್ತು ದುರ್ದೈವ ತಾಂಡವವಾಡ್ತಾ ಇದೆ.. ಗುಡ್ಡದ ಭೂತ ನೂರಾರು ಜನರ ಬಲಿ ಪಡೆದಿದೆ. ಈ ದುರಂತಕ್ಕೀಗ ಯಾರು ಹೊಣೆ? ವೈಜ್ಞಾನಿಕ ವರದಿಯನ್ನ ವಿರೋಧಿಸಿದ್ದಕ್ಕೇ ಕೇರಳದಲ್ಲಿ ಇಂಥಾ ದಾರುಣ ಸ್ಥಿತಿ ನಿರ್ಮಾಣವಾಯ್ತಾ? ಈ ದುರಂತ ಇಷ್ಟಕ್ಕೇ ಮುಗಿಯುತ್ತಾ? ಇನ್ನೂ ಕಾಡುತ್ತಾ? ನೋಡಬೇಕಿದೆ. ಟೂರಿಸಮ್ಗೆ ಫೇಮಸ್ ಆಗಿದ್ದ ಕೇರಳ ಇವತ್ತು ಮಹಾದುರಂತದಿಂದ ಟ್ರೆಂಡ್ ಆಗ್ತಾ ಇದೆ. ಅಲ್ಲಿನ ಒಂದೊಂದು ಶವವೂ ಅತ್ಯಂತ ದಾರುಣ ಕತೆ ಹೇಳ್ತಾ ಇದೆ.

Video Top Stories