ಮುಸ್ಲಿಮ್ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರಿಗೆ ಅವಕಾಶ,ತಿದ್ದುಪಡಿ ಬಿಲ್ ಮಂಡನೆ
ವಕ್ಫ್ ಬೈ ಯೂಸರ್ ನಿಯಮ ಏನು ಹೇಳುತ್ತೆ?ಮೋದಿ ಸರ್ಕಾರದ ವಕ್ಪ್ ಬಿಲ್ ತಿದ್ದುಪಡಿಯಲ್ಲಿ ಏನಿದೆ?ವಕ್ಫ್ ಬೋರ್ಡ್‌ಗೆ ಭೂಮಿ ದಾನ ಮಾಡಲು ಹೊಸ ನಿಯಮ ಸೇರಿದಂತೆ ವಕ್ಫ್ ಬಿಲ್ ಹಾಗೂ ಲೋಕಸಭಾ ಚರ್ಚೆಯ ಸಂಪೂರ್ಣ ವಿಡಿಯೋ ನ್ಯೂಸ್ ಹವರ್ ಇಲ್ಲಿದೆ.
ವಿರೋಧ ಪಕ್ಷಗಳ ವಿರೋಧದ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಬಿಲ್ ಮಂಡನೆಯಾಗಿದೆ. ಭಾರಿ ಹಗ್ಗಜಗ್ಗಾಟ ನಡೆದಿದೆ. ವಿಪಕ್ಷಗಳ ಆತಂಕ, ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರಿಸಿದ್ದಾರೆ. ಈ ಬಿಲ್‌ನಲ್ಲಿ ಮುಸ್ಲಿಮ್ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡಲಾಗಿದೆ. ಭಾರತದಲ್ಲಿ ವಕ್ಪ್ ಆಸ್ತಿ ಎಷ್ಟಿದೆ? 2006ರಲ್ಲಿ 1.2 ಲಕ್ಷ ಏಕರೆ ಇದ್ದ ಭೂಮಿ ಇದೀಗ 9.4 ಲಕ್ಷ ಏಕರೆಗೆ ಏರಿಕೆಯಾಗಿದೆ.ಮೋದಿ ಸರ್ಕಾರದ ವಕ್ಫ್ ತಿದ್ದುಪಡಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿ ತಂದ ವಕ್ಫ್ ತಿದ್ದುಪಡಿಯಲ್ಲಿ ಏನಿದೆ?